ಪುತ್ರನನ್ನು ಜೇನುನೊಣಗಳ ದಾಳಿಯಿಂದ ರಕ್ಷಿಸಲು ಹೋಗಿ ತಾನೇ ಬಲಿಯಾದ ತಂದೆ! - Mahanayaka

ಪುತ್ರನನ್ನು ಜೇನುನೊಣಗಳ ದಾಳಿಯಿಂದ ರಕ್ಷಿಸಲು ಹೋಗಿ ತಾನೇ ಬಲಿಯಾದ ತಂದೆ!

25/02/2021

ಬೆಂಗಳೂರು: ಎಎಂಸಿ ಇಂಜಿನಿಯರಿಂಗ್  ಕಾಲೇಜಿನ ಪ್ರವೇಶ ಪರೀಕ್ಷೆ ಬರೆಯಲು ಬಂದಿದ್ದ ಆಂಧ್ರಪ್ರದೇಶದ ವ್ಯಕ್ತಿಯೋರ್ವರು ಜೇನುನೊಣಗಳ ದಾಳಿಗೆ ಬಲಿಯಾದ ದಾರುಣ ಘಟನೆ ನಡೆದಿದೆ.


Provided by

ಆಂಧ್ರಪ್ರದೇಶದ ವೆಂಕಟ ರಮೇಶ್ ಉಪ್ಪಳ ಪಾಟಿ ಎಂಬವರು ತಮ್ಮ ಮಗನನ್ನು ಕಾಲೇಜಿಗೆ ಸೇರಿಸಲು ಬೆಂಗಳೂರಿಗೆ ಬಂದಿದ್ದರು.  ಕಾಲೇಜಿನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾಗ ವಿದ್ಯಾರ್ಥಿಗಳ ಮೇಲೆ ಏಕಾಏಕಿ ಜೇನುನೊಣಗಳು ದಾಳಿ ಮಾಡಿವೆ.

ಜೇನುನೊಣಗಳ ದಾಳಿಯಿಂದ ತನ್ನ ಪುತ್ರ ರಿತ್ವಿಕ್ ನನ್ನು ಪಾರು ಮಾಡಲು ಹೋದ ರಮೇಶ್ ಮೇಲೆ ಜೇನುನೊಣಗಳು ದಾಳಿ ನಡೆಸಿದ್ದು, ಅತೀ ಹೆಚ್ಚು ಸಂಖ್ಯೆಲ್ಲಿ ಜೇನುನೊಣಗಳು ರಮೇಶ್ ಅವರನ್ನು ಮುತ್ತಿಕೊಂಡಿದೆ.

ಜೇನುನೊಣದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿಯಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸರತಿ ಸಾಲಿನಲ್ಲಿ ನಿಂತಿದ್ದ  20ಕ್ಕೂ ಅಧಿಕ ವಿದ್ಯಾರ್ಥಿಗಳ ಮೇಲೆ ಕೂಡ ಜೇನುನೊಣಗಳು ದಾಳಿ ನಡೆಸಿದ್ದು ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ಇತ್ತೀಚಿನ ಸುದ್ದಿ