ಕೇರಳದಲ್ಲಿ ಆರೆಸ್ಸೆಸ್ ಮುಖಂಡನ ಹತ್ಯೆ ಹೇಗೆ ನಡೆಯಿತು? | ನಿಲ್ಲಿಸಿದ್ದ ಕಾರಿನಲ್ಲಿ ಏನಿತ್ತು ಗೊತ್ತಾ? - Mahanayaka

ಕೇರಳದಲ್ಲಿ ಆರೆಸ್ಸೆಸ್ ಮುಖಂಡನ ಹತ್ಯೆ ಹೇಗೆ ನಡೆಯಿತು? | ನಿಲ್ಲಿಸಿದ್ದ ಕಾರಿನಲ್ಲಿ ಏನಿತ್ತು ಗೊತ್ತಾ?

25/02/2021

ಆಲಪ್ಪುಳ: ಕೇರಳದ ಆಲಪ್ಪುಳದ ವಾಯಲಾರ್ ನಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಹೆಸರಿಸಲಾಗಿದ್ದು,  ಮೊದಲ ಆರೋಪಿ ಹರ್ಷದ್ ಮತ್ತು ಎರಡನೇ ಆರೋಪಿ ಅಶ್ಕರ್ ಎಂದು ಗುರುತಿಸಲಾಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಿಸಲಾಗಿತ್ತು. ಪ್ರಮುಖ ಆರೋಪಿಗಳಾದ ಹರ್ಷದ್ ಹಾಗೂ ಅಶ್ಕರ್ ಶಸ್ತ್ರಾಸ್ತ್ರಗಳನ್ನು ಹಂತಕರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.  ಈ ಹತ್ಯೆಯ ವಿರುದ್ಧ ಬಿಜೆಪಿಯು ಆಲಪ್ಪುಳದಲ್ಲಿ ಹರತಾಳ ಘೋಷಿಸಿದೆ.

ವಾಯಲರ್  ಆರ್‌ ಎಸ್‌ ಎಸ್ ಶಾಖೆಯ ಮುಖಂಡ 22 ವರ್ಷ ವಯಸ್ಸಿನ ತಟ್ಟಂಪರಂಬ್ ನಂದು ಕೃಷ್ಣನ್ ಹತ್ಯೆಗೀಡಾದ ಯುವಕನಾಗಿದ್ದಾನೆ. ಬುಧವಾರ ರಾತ್ರಿ 8 ಗಂಟೆಯ ವೇಳೆಗೆ ಈ ಘಟನೆ ನಡೆದಿತ್ತು. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಇದರಿಂದಾಗಿ ಚೆರ್ತಾಲಾ ಮತ್ತು ಅಂಬಲಫುಳ ತಾಲೂಕುಗಳಲ್ಲಿ ನಿಷೇಧಾಜ್ಞೆ ಘೋಷಿಸಲಾಗಿತ್ತು.

ಆರೆಸ್ಸೆಸ್ ಮುಖಂಡನ ಹತ್ಯೆಯ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ವರೆಗೆ ನಿಷೇಧಾಜ್ಞೆ ಘೋಷಿಸಲಾಗಿದೆ.  ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮೂರು ಅಂಗಡಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ  ಭಸ್ಮವಾಗಿದ್ದು,  ಒಂದು ಅಂಗಡಿಯನ್ನು ಪ್ರತಿಭಟನಾಕಾರರು ಧ್ವಂಸ ಮಾಡಿದ್ದಾರೆ.

ಇತ್ತೀಚಿನ ಸುದ್ದಿ