ಆಸ್ಪತ್ರೆಯಿಂದ ಗುಣಮುಖರಾಗಿ ಮರಳುತ್ತಿದ್ರು: ಮನೆ ಸೇರುವಷ್ಟರಲ್ಲಿ ಅಪಘಾತದಲ್ಲಿ ಮಹಿಳೆ ಸಾವು - Mahanayaka

ಆಸ್ಪತ್ರೆಯಿಂದ ಗುಣಮುಖರಾಗಿ ಮರಳುತ್ತಿದ್ರು: ಮನೆ ಸೇರುವಷ್ಟರಲ್ಲಿ ಅಪಘಾತದಲ್ಲಿ ಮಹಿಳೆ ಸಾವು

11/10/2023


Provided by

ವಿಧಿ ಬರಹವನ್ನು ತಪ್ಪಿಸಲಾಗದು ಎಂಬ ಮಾತು ಆಗಾಗ ಆಡುತ್ತಿರುತ್ತೇವೆ. ಅಂತಹದ್ದೇ ಒಂದು ಘಟನೆ ಕೇರಳದ ಕೊಟ್ಟಯಂ ನಲ್ಲಿ ನಡೆದಿದೆ. ಅಮ್ಮಿಣಿ ಎಂಬ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೆಯೇ ಗುಣಮುಖರಾಗಿ ಮನೆಗೆ ಮರಳುವಾಗ ಆಘಾತಕಾರಿ ಘಟನೆಯೊಂದು ನಡೆದಿದೆ.

ಅನಾರೋಗ್ಯ ನಿಮಿತ್ತ ಈ ಅಮ್ಮಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಗುಣಮುಖರಾದ ಹಿನ್ನೆಲೆಯಲ್ಲಿ ಮಗಳು ಅವರನ್ನು ಕಾರಲ್ಲಿ ಕೂರಿಸಿ ಮರಳಿ ಮನೆಗೆ ಕರೆದು ಕರೆತರುತ್ತಿದ್ದರು. ಆದರೆ ದಾರಿ ಮಧ್ಯೆ ಈ ಕಾರು ಅಪಘಾತಕ್ಕೀಡಾಯಿತು. ಮಾತ್ರವಲ್ಲ, ಈ ಅಪಘಾತದಲ್ಲಿ ಅವರು ಮೃತಪಟ್ಟರು. ಚಾಲನೆಯ ಮಧ್ಯೆ ಮಗಳು ತೂಕಡಿಸಿದ್ದೆ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಅಂತೂ ಗುಣಮುಖರಾಗಿ ಮನೆಗೆ ಮರಳುವ ಪರಿಸ್ಥಿತಿ ಉಂಟಾದರೂ ಅವರ ಆಯುಷ್ಯ ಮನೆಯವರೆಗೆ ಇರಲಿಲ್ಲ ಎಂದು ನಾಗರಿಕರು ಹೇಳಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ