ದಿಗ್ವಿಜಯ: ಬಿಜೆಪಿಯನ್ನು 3ನೇ ಸ್ಥಾನಕ್ಕಿಳಿಸಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಮುಸ್ಲಿಂ ಸಂಸದ - Mahanayaka

ದಿಗ್ವಿಜಯ: ಬಿಜೆಪಿಯನ್ನು 3ನೇ ಸ್ಥಾನಕ್ಕಿಳಿಸಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಮುಸ್ಲಿಂ ಸಂಸದ

06/06/2024


Provided by

ಈ ಬಾರಿ ಹತ್ತು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಗಮನ ಸೆಳೆಯುತ್ತಿರುವವರು ರಕೀಬುಲ್ ಹುಸೇನ್. ಅಸ್ಸಾಂ ಲ್ಲಿ ದುಬ್ರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ಇಳಿಸಿ ಹತ್ತು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪ್ರಚಂಡ ಜಯ ಗಳಿಸಿದ್ದಾರೆ.

ದೊಡ್ಡ ಲೋಕಸಭಾ ಕ್ಷೇತ್ರವಾದ ದುಬ್ರಿಯಲ್ಲಿ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಬೋಟ್ ಮೂಲಕ ನದಿ ದಾಟಬೇಕಾಗುತ್ತದೆ. ರಕೀಬುಲ್ ಹಸನ್ ರವರು ಬೋಟ್ ನಲ್ಲಿ ನದಿ ದಾಟಿ ತನ್ನ ಪ್ರಚಾರ ಮಾಡಿ ಭರ್ಜರಿ ಜಯ ಗಳಿಸಿದ್ದಾರೆ.

ರಕೀಬುಲ್ ಹುಸೇನ್ ಅವರು ಅಸ್ಸಾಮಿನ ದುಬ್ರಿ ಕ್ಷೇತ್ರದಿಂದ ಹಾಲಿ ಸಾಂಸದ ಎಐಯುಡಿಎಫ್ ನ ಬದ್ರುದ್ದೀನ್ ಅಜ್ಮಲ್ ರನ್ನು 10 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ದುಬ್ರಿಯಲ್ಲಿ 27 ಲಕ್ಷ ಮತದಾರರಿದ್ದು, ಇಲ್ಲಿ 92.1 ಶೇಕಡಾ ಮತದಾನವಾಗಿತ್ತು. ಮೂರನೇ ಹಂತದವರೆಗೂ ಇದುವೇ ಇಡೀ ದೇಶದಲ್ಲಿ ಒಂದು ಕ್ಷೇತ್ರದಲ್ಲಾದ ಅತಿ ಹೆಚ್ಚು ಮತದಾನವಾಗಿತ್ತು. ರಕೀಬುಲ್ ಹುಸೇನ್ ಅವರು 60% ಮತಗಳನ್ನು ಪಡೆದಿದ್ದಾರೆ. ಅವರಿಗೆ ಒಟ್ಟು 14.5 ಲಕ್ಷ ಮತಗಳು ಸಿಕ್ಕಿದ್ದರೆ ಬದ್ರುದ್ದೀನ್ ಅಜ್ಮಲ್ ಅವರಿಗೆ ಕೇವಲ 4.5 ಲಕ್ಷ ಮತಗಳು ಪಡೆಯಲು ಸಾಧ್ಯವಾಗಿದೆ. ಇನ್ನು ಇಲ್ಲಿ ಬಿಜೆಪಿ ಮೈತ್ರಿಯಲ್ಲಿದ್ದು ಮೂರನೇ ಸ್ಥಾನಕ್ಕೆ ಕುಸಿದು ಹೋಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ