ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಪಾಕಿಸ್ತಾನದ ಈ ಊರಲ್ಲಿ ಶೋಕ! - Mahanayaka
9:16 AM Wednesday 20 - August 2025

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಪಾಕಿಸ್ತಾನದ ಈ ಊರಲ್ಲಿ ಶೋಕ!

27/12/2024


Provided by

ಮನಮೋಹನ ಸಿಂಗ್ ಪ್ರದಾನಿಯಾದಾಗಲೂ ಪಾಕಿಸ್ತಾನದ ಈ ಊರಲ್ಲಿ ಸಂಭ್ರಮ ಇತ್ತು. ಅವರ ನಿಧನವೂ ಅವರಿಗೆ ದುಃಖದಾಯಕವಾಗಿದೆ. ಮನಮೋಹನ ಸಿಂಗ್ ಹುಟ್ಟಿದ್ದು, ಈಗಿನ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ. ಪಂಜಾಬ್‌ನ ಚಕ್ವಾಲ್ ಜಿಲ್ಲೆಯ ಗಾಹ್ ಗ್ರಾಮ ಅವರ ಹುಟ್ಟೂರು.
2004ರಲ್ಲಿ ಅವರು ಮೊದಲ ಬಾರಿ ಪ್ರಧಾನಿಯಾದಾಗ ಇಡೀ ಊರಿನ ಮಂದಿ ಸಂಭ್ರಮಿಸಿದ್ದರು. ಭಾರತದ ಪ್ರಧಾನಿಯ ಪ್ರಮಾಣ ವಚನಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮ ಮನೆ ಮಾಡಿತ್ತು.

2007ರಲ್ಲಿ ಗಾಹ್ ಗ್ರಾಮವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಪಂಜಾಬ್ ಸರ್ಕಾರ ಘೋಷಣೆ ಮಾಡಿತು. ಅಲ್ಲಿನ ಶಾಲೆಯೊಂದಕ್ಕೆ ಮನಮೋಹನ ಸಿಂಗ್ ರ ಹೆಸರಿಟ್ಟಿತು. ಪ್ರಾಥಮಿಕ ಶಾಲೆಯೊಂದಕ್ಕೆ ‘ಮನಮೋಹನ ಸಿಂಗ್ ಸರ್ಕಾರಿ ಬಾಲಕರ ಶಾಲೆ’ ಎಂದು ನಾಮಕರಣ ಮಾಡಲಾಯಿತು.

ಅಲ್ಲದೆ ಗಾಹ್‌ಗೆ ಭೇಟಿ ನೀಡಬೇಕು ಎಂದು ಅಲ್ಲಿನ ಗ್ರಾಮಸ್ಥರು ಸಿಂಗ್ ರಿಗೆ ಮನವಿ ಮಾಡಿದ್ದರು. ಸಿಂಗ್ ಅವರ ಸಹಪಾಠಿ ಎಂದು ಹೇಳಿಕೊಂಡಿದ್ದ ಗಾಹ್‌ ಗ್ರಾಮದ ರಾಜ ಮೊಹಮ್ಮದ್ ಅಲಿ ಎಂಬುವವರು ಭಾರತಕ್ಕೆ ಬಂದು ಸಿಂಗ್ ಹಾಗೂ ಕುಟುಂಬದವರನ್ನೂ ಭೇಟಿ ಮಾಡಿದ್ದಾಗಿ ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ