ಗಾಝಾದಲ್ಲಿ ಇಸ್ರೇಲ್ ಬಾಂಬ್ ಜತೆ ಚಳಿಯ ದಾಳಿ: ಜನರಿಗೆ ‘ಮರಣ’ ಪರೀಕ್ಷೆ!
ಗಾಝಾವನ್ನು ಒಂದು ಕಡೆ ಇಸ್ರೇಲ್ ನ ಬಾಂಬುಗಳು ಆಕ್ರಮಿಸುತ್ತಿದ್ದರೆ ಇನ್ನೊಂದು ಕಡೆ ಕಠಿಣ ಚಳಿ ಅಲ್ಲಿನ ಜನರನ್ನು ಪರೀಕ್ಷಿಸುತ್ತಿದೆ. ಅಲ್ ಮವಾಸಿ ನಿರಾಶ್ರಿತ ಶಿಬಿರದಲ್ಲಿ ಕಳೆದ 48 ಗಂಟೆಗಳ ಒಳಗೆ ಮೂರು ಶಿಶು ಗಳು ಚಳಿಯಿಂದಾಗಿ ಮೃತಪಟ್ಟಿವೆ. ಕಠಿಣ ಚಳಿಯು ಫೆಲಸ್ತಿನನ್ನು ಆವರಿಸಿಕೊಂಡಿದ್ದು ನಿರಾಶ್ರಿತ ಶಿಬಿರದಲ್ಲಿ ಚಳಿಯನ್ನು ತಡೆದುಕೊಳ್ಳುವುದಕ್ಕೆ ಬೇಕಾದ ಏನೂ ಇಲ್ಲದಿರುವುದರ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳು ಉಂಟಾಗಬಹುದು ಎಂದು ಹೇಳಲಾಗಿದೆ.
ಮೃತಪಟ್ಟ ಮೂರೂ ಶಿಶುಗಳು ಆರೋಗ್ಯ ಪೂರ್ಣವಾಗಿದ್ದು ಯಾವುದೇ ಸಮಸ್ಯೆ ಇಲ್ಲದೆ ಈ ಶಿಶುಗಳ ಪ್ರಸವವಾಗಿತ್ತು. ಆದರೆ ಕಠಿಣ ಚಳಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಈ ಶಿಶುಗಳು ಮೃತಪಟ್ಟಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಅಲ್ ಮವಾಸಿಯ ಶಿಬಿರದಲ್ಲಿ ಸಾವಿರಾರು ಮಂದಿ ನೆಲೆಸಿದ್ದಾರೆ ಬಟ್ಟೆ ಮತ್ತು ನೈಲಾನ್ ನಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಶಿಬಿರಗಳು ಇವು. ಅತ್ಯಂತ ಕನಿಷ್ಠ ವಾಸ ಸೌಲಭ್ಯದೊಂದಿಗೆ ಇಲ್ಲಿ ಜನರು ಬದುಕುತ್ತಿದ್ದಾರೆ. ಬರೇ ನೆಲದಲ್ಲಿಯೇ ಜನರು ಮಲಗುತ್ತಿದ್ದು ಕನಿಷ್ಠ ಚಾದರವೂ ಇಲ್ಲದೆ ದಿನದೂಡುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj