ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪರ ಭಾರೀ ಅಲೆ: ಖರ್ಗೆ ಖುಷಿ - Mahanayaka

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪರ ಭಾರೀ ಅಲೆ: ಖರ್ಗೆ ಖುಷಿ

21/05/2024

ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪರ ಭಾರಿ ಅಲೆ ಕಾಣಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪರ ಜನರ ಒಲವು ಈ ಚುನಾವಣೆಯಲ್ಲಿ ಎದ್ದು ಕಾಣುತ್ತಿದೆ. ಬಿಜೆಪಿಗೆ ಬಹುಮತ ಸಿಗದಂತೆ ಇಂಡಿಯಾ ಕೂಟ ನೋಡಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಸಮಾಜದಲ್ಲಿ ದ್ವೇಷ ಮತ್ತು ಬಿಕ್ಕಟ್ಟನ್ನು ಪೋಷಿಸುತ್ತಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಇವತ್ತು ಹೋರಾಡುತ್ತಿರುವುದು ಜನರಾಗಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾತಂತ್ರವನ್ನು ರಕ್ಷಿಸುವ ಹೋರಾಟ ಎಂದು ಜನರಿಗೆ ಈಗ ಅರ್ಥವಾಗುತ್ತಿದೆ. ರಾಮ ಮಂದಿರ ಹಿಂದೂ ಮುಸ್ಲಿಂ, ಭಾರತ ಪಾಕಿಸ್ತಾನ ಮುಂತಾಡುವುಗಳನ್ನು ಬಿಜೆಪಿ ಪದೇ ಪದೇ ಹೇಳುತ್ತಾ ಜನರನ್ನು ದ್ವೇಷದಡೆಗೆ ಸೆಳೆಯುತ್ತಿದೆ. ದೇಶಾದ್ಯಂತ ಸಂಚರಿಸಿದ ನನಗೆ ನಮ್ಮ ಪರ ದೊಡ್ಡದೊಂದು ಒಲವು ಸೃಷ್ಟಿಯಾಗಿರುವುದನ್ನು ಕಂಡೆ. ಈ ಬಾರಿ ಕಾಂಗ್ರೆಸ್ ಮತ್ತು ಇಂಡಿಯಾ ಕೂಟಕ್ಕೆ ಅತ್ಯಧಿಕ ಸ್ಥಾನಗಳು ಲಭಿಸಲಿವೆ ಎಂದು ಖರ್ಗೆ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ