ನನ್ನ ಕಿಡ್ನಿ ವಾಪಸ್ ಕೊಡು: ವಿಚ್ಛೇದನದ ವೇಳೆ ಪತ್ನಿಗೆ ಬೇಡಿಕೆಯಿಟ್ಟ ಪತಿ - Mahanayaka

ನನ್ನ ಕಿಡ್ನಿ ವಾಪಸ್ ಕೊಡು: ವಿಚ್ಛೇದನದ ವೇಳೆ ಪತ್ನಿಗೆ ಬೇಡಿಕೆಯಿಟ್ಟ ಪತಿ

devorces
21/02/2024


Provided by

ಪತ್ನಿಗೆ ಕಿಡ್ನಿ ದಾನ ಮಾಡಿ ಜೀವ ಉಳಿಸಿದ ಗಂಡನಿಗೇ ಪತ್ನಿ ಡಿವೋರ್ಸ್ ನೀಡಿದ್ದು, ಇದರಿಂದ ಕೋಪಗೊಂಡ ಪತಿ ‘ನನ್ನ ಕಿಡ್ನಿಯನ್ನು ನನಗೆ ಮರಳಿ ನೀಡು’ ಎಂದು ಕೋರ್ಟ್ ನಲ್ಲಿ ಬೇಡಿಕೆ ಇಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

1990ರಲ್ಲಿ ಪತಿ ರಿಚರ್ಡ್ ಬಟಿಸ್ಟಾ ಮತ್ತು ಪತ್ನಿ ಡೊನ್ನೆಲ್ ವಿವಾಹವಾಗಿದ್ದರು. ಪತ್ನಿಯ ಎರಡೂ ಕಿಡ್ನಿಗಳು ವೈಫಲ್ಯವಾದಾಗ ಪತಿ, ತನ್ನ ಒಂದು ಕಿಡ್ನಿ ದಾನ ಮಾಡಿ ಆಕೆಯ ಜೀವ ಉಳಿಸಿದ್ದ. ಆದರೆ ಕೆಲವು ವರ್ಷಗಳ ನಂತರ ಪತಿ ಪತ್ನಿಯ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಪತ್ನಿ ಡಿವೋರ್ಸ್ ಪಡೆದುಕೊಳ್ಳಲು ನಿರ್ಧರಿಸಿದ್ದು, ಕೋರ್ಟ್ ನಲ್ಲಿ ದಾವೆ ಹೂಡಿದ್ದಳು.

ಪತ್ನಿ ಡಿವೋರ್ಸ್ ನೀಡಲು ಬೇಡಿಕೆಯಿಟ್ಟ ಕಾರಣ, ಕೋಪಗೊಂಡ ಪತಿ, ತಾನು ದಾನ ಮಾಡಿದ ಕಿಡ್ನಿ ವಾಪಸ್ ನೀಡಬೇಕು, ಇಲ್ಲವಾದರೆ 1.2 ಮಿಲಿಯನ್ ಪೌಂಡ್(12.56ಕೋಟಿ ರೂ.) ಹಣ ನೀಡಬೇಕು ಎಂದು ಕೋರ್ಟ್ ನಲ್ಲಿ ಬೇಡಿಕೆಯಿಟ್ಟಿದ್ದಾನೆ.

ಆದರೂ ಪತಿ ರಿಚರ್ಡ್ ಗೆ ನ್ಯಾಯ ಸಿಕ್ಕಿಲ್ಲ, ಡೊನ್ನೆಲ್ ತನ್ನ ಮೂತ್ರಪಿಂಡವನ್ನು ಹಿಂದಿರುಗಿಸಲು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅವರ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ಮೂತ್ರಪಿಂಡವನ್ನು ಮರಳಿ ನೀಡಲು ಸಾಧ್ಯವಿಲ್ಲ ಎಂದು ತಜ್ಞರ ಹೇಳಿಯನ್ನು ಆಧರಿಸಿ ಕೋರ್ಟ್ ತೀರ್ಪು ನೀಡಿದೆ.

ಇತ್ತೀಚಿನ ಸುದ್ದಿ