ಪತ್ನಿಯ ಪ್ರಿಯಕರನನ್ನು ಮನೆಯಲ್ಲಿಟ್ಟುಕೊಳ್ಳಲು ಒಪ್ಪದ ಗಂಡ: ವಿದ್ಯುತ್ ಕಂಬಕ್ಕೆ ಏರಿದ ಪತ್ನಿ! - Mahanayaka
2:26 AM Saturday 13 - September 2025

ಪತ್ನಿಯ ಪ್ರಿಯಕರನನ್ನು ಮನೆಯಲ್ಲಿಟ್ಟುಕೊಳ್ಳಲು ಒಪ್ಪದ ಗಂಡ: ವಿದ್ಯುತ್ ಕಂಬಕ್ಕೆ ಏರಿದ ಪತ್ನಿ!

uttar pradesh
05/04/2024

ಲಕ್ನೋ: ಪ್ರಿಯಕರನನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕು ಎಂದು ಪಟ್ಟು ಹಿಡಿದ 3 ಮಕ್ಕಳ ತಾಯಿಯೊಬ್ಬಳು ವಿದ್ಯುತ್ ಕಂಬಕ್ಕೆ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ  ಉತ್ತರ ಪ್ರದೇಶದ ಗೋರಖ್‌ಪುರದ ಪಿಪ್ರೈಚ್ ನಗರದಲ್ಲಿ ನಡೆದಿದೆ.


Provided by

ಮಹಿಳೆ ವಿವಾಹಿತೆಯಾಗಿದ್ದು, ಮೂವರು ಮಕ್ಕಳಿದ್ದರೂ ತನ್ನ ಪಕ್ಕದ ಊರಿನ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಗಂಡ ರಾಮ್ ಗೋವಿಂದ್ ಗೆ ಈ ವಿಚಾರ ಹೇಗೋ ತಿಳಿಯಿತು. ಇದನ್ನು ಆತ ಪ್ರಶ್ನಿಸಿದ ವೇಳೆ ಗಲಾಟೆ ಆರಂಭವಾಗಿದೆ.

ಮನೆ ನೀನೇ ನೋಡಿಕೋ, ನನ್ನ ಪ್ರಿಯಕರನನ್ನೂ ಮನೆಯಲ್ಲಿಟ್ಟುಕೊಳ್ಳಬೇಕು ಎಂದು ಮಹಿಳೆ ಗಂಡನಿಗೆ ಪಟ್ಟು ಹಿಡಿದಿದ್ದಾಳೆ. ಇದಕ್ಕೆ ಗಂಡ ಒಪ್ಪದ ವೇಳೆ ಟೆನ್ಸನ್​ ಕರೆಂಟ್ ಕಂಬ ಏರಿ ವೈರ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

ಆಕೆ ವೈರ್ ಹಿಡಿಯುವ ಮೊದಲೇ ಸ್ಥಳೀಯರು ಆಕೆಯನ್ನು ನೋಡಿ ತಡೆ ಹಿಡಿದು ತಕ್ಷಣ ಪೊಲೀಸರಿಗೆ, ವಿದ್ಯುತ್​ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ವಿದ್ಯುತ್​ ಅನ್ನು ಬಂದ್ ಮಾಡಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಗೆ ಬುದ್ಧಿವಾದ ಹೇಳಿ ಕುಟುಂಬಸ್ಥರ ಜೊತೆಗೆ ಮನೆಗೆ ಕಳುಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ