ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತಂದಿದ್ದೇನೆ: ಸಂಸದ ಪ್ರತಾಪ್ ಸಿಂಹ - Mahanayaka

ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತಂದಿದ್ದೇನೆ: ಸಂಸದ ಪ್ರತಾಪ್ ಸಿಂಹ

prathap simha
15/02/2024


Provided by

ಮೈಸೂರು: ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತರಿಸಿದ್ದೇನೆ. 2014ಕ್ಕೂ ಮೊದಲು ಒಂದು ರೈಲು ಬಂದಿಲ್ಲ. ಶೀಘ್ರದಲ್ಲೇ 12ನೇ ಮೈಸೂರು–ರಾಮೇಶ್ವರಂ ರೈಲು ಬರಲಿದೆ  ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಮೈಸೂರು ಕೊಡಗು ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆ ಮಾಡಿ ಮಾತನಾಡಿದ ಅವರು,  ಮುಂದಿನ ದಿನಗಳಲ್ಲಿ  ಬೆಂಗಳೂರು ಮೈಸೂರು ಮೆಟ್ರೋ ಬರಲಿದೆ ಎಂದು ಹೇಳಿದರು.

10 ವರ್ಷದಲ್ಲಿ ನಾನು ಕೆಲಸ ಮಾಡಿದ ರಿಪೋರ್ಟ್ ಕಾರ್ಡ್ ನೀಡಿದ್ದೇನೆ. ಪ್ರಧಾನಿ ಮೋದಿ ಕೊಟ್ಟಿದ್ದೇನು? ಪ್ರತಾಪ್ ಸಿಂಹ ತಂದಿದ್ದೇನು? ಅನ್ನೋ ಬುಕ್‌ ಲೆಟ್ ಇದರಲ್ಲಿ ಕೇಂದ್ರದ ಡಿಪಾಲ್ಟ್ ಯೋಜನೆ ಪಟ್ಟಿ ಇಲ್ಲಿ ಮಾಡಿಲ್ಲ. 2014ರ ಹಿಂದೆ ಒಂದು ಟ್ರೈನ್ ಬಂದಿಲ್ಲ. ನಾನು 11 ಟ್ರೈನ್ ತಂದಿದ್ದೇನೆ. 12ನೇ ರೈಲು ಸದ್ಯದಲ್ಲೇ ಬರಲಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ