“ನಾನು ಚಿಪ್ಸ್ ಕದ್ದಿಲ್ಲಮ್ಮ”: ಡೆತ್ ನೋಟ್ ಬರೆದಿಟ್ಟು ಬಾಲಕ ಸಾವಿಗೆ ಶರಣು - Mahanayaka

“ನಾನು ಚಿಪ್ಸ್ ಕದ್ದಿಲ್ಲಮ್ಮ”: ಡೆತ್ ನೋಟ್ ಬರೆದಿಟ್ಟು ಬಾಲಕ ಸಾವಿಗೆ ಶರಣು

boy
24/05/2025

ಕೋಲ್ಕತ್ತಾ:  “ನಾನು ಚಿಪ್ಸ್ ಕದ್ದಿಲ್ಲ” ಎಂದು ಡೆತ್ ನೋಟ್ ಬರೆದು 7ನೇ ತರಗತಿಯ ಬಾಲಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ನಡೆದಿದೆ.

ಭಾನುವಾರ ತಿಂದಿ ಖರೀದಿಸಲೆಂದು ಬಾಲಕ ಅಂಗಡಿಗೆ ಹೋಗಿದ್ದ. ಆ ವೇಳೆ ಅಂಗಡಿಯಲ್ಲಿ ಯಾರೂ ಇರಲಿಲ್ಲ.. ಹೀಗಾಗಿ ಹೊರಗಿದ್ದ ಚಿಪ್ಸ್ ಪ್ಯಾಕ್ ನ್ನು ಬಾಲಕ ಎತ್ತಿಕೊಂಡು ಹೋಗಿದ್ದಾನೆ ಎಂದು ಅಂಗಡಿ ಮಾಲಿಕ ಆರೋಪಿಸಿದ್ದ.

ವಾಸ್ತವವಾಗಿ ಬಾಲಕ ಅಂಗಡಿಗೆ ಹೋಗಿ ಚಿಪ್ಸ್ ಕೇಳಿದ್ದ, ಈ ವೇಳೆ ಅಂಗಡಿ ಮಾಲಿಕನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ,  ಅಂಗಡಿಯಲ್ಲಿ ಯಾರೂ ಇಲ್ಲ ಎಂದು ಅಂದುಕೊಂಡು ಬಾಲಕ ಅಲ್ಲಿಂದ ಹೊರಟು ಹೋಗಿದ್ದ. ಈ ವೇಳೆ ಅಂಗಡಿ ಮಾಲಿಕ ಎಚ್ಚೆತ್ತುಕೊಂಡು ಬಾಲಕ ಚಿಪ್ಸ್ ಕದ್ದುಕೊಂಡು ಹೋಗಿದ್ದಾನೆ ಎಂದು ಭಾವಿಸಿ ಆತನನ್ನು ಸೈಕಲ್ ನಲ್ಲಿ ಅಟ್ಟಾಡಿಸಿಕೊಂಡು ಹೋಗಿದ್ದಾನೆ. ಅದೇ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಕಾಲಿನ ಬಳಿ ಚಿಪ್ಸ್ ಪ್ಯಾಕ್ ಬಿದ್ದಿದ್ದನ್ನು ಬಾಲಕ ಎತ್ತಿಕೊಂಡು ನೋಡುತ್ತಿದ್ದ. ಚಿಪ್ಸ್ ಕದ್ದಿದ್ದೀಯಾ? ಹಣ ಕೊಡು ಎಂದು ಬೆದರಿಸಿದ ಅಂಗಡಿ ಮಾಲಿಕ 15 ರೂಪಾಯಿಯ ಚಿಪ್ಸ್ ಗೆ ಬಾಲಕನಿಂದ 20 ರೂಪಾಯಿ ಎಳೆದುಕೊಂಡಿದ್ದಲ್ಲದೇ, ಸಾರ್ವಜನಿಕರೆದುರೇ ಕಳ್ಳ ಎಂದು ಕರೆದು ಕಪಾಳಮೋಕ್ಷ ಮಾಡಿ, ಅವಮಾನಿಸಿದ್ದ.


Provided by

ತೀವ್ರವಾಗಿ ಅವಮಾನಕ್ಕೊಳಗಾದ ಬಾಲಕ ಮನೆಗೆ ಬಂದು ಬಾಗಿಲು ಹಾಕಿಕೊಂಡು, ಅಮ್ಮ ನಾನು ಚಿಪ್ಸ್ ಕದ್ದಿಲ್ಲ, ನನ್ನನ್ನು ಕ್ಷಮಿಸು ಎಂದು ಡೆತ್ ನೋಟ್ ಬರೆದಿಟ್ಟು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೇವಲ 15 ರೂಪಾಯಿಯ ಚಿಪ್ಸ್ ಗಾಗಿ ಬಾಳಿ ಬದುಕಬೇಕಿದ್ದ ಬಾಲಕನ ಪ್ರಾಣವನ್ನೇ ಬಲಿ ಪಡೆದ ಅಂಗಡಿ ಮಾಲೀಕನ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಬಾಲಕ ಹಣ ನೀಡಿದರೂ, ಆತನನ್ನು ನಿಂದಿಸಿ, ಅವಮಾನಿಸಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಪಾಪಿ ಅಂಗಡಿ ಮಾಲೀಕನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಸಸ್ಯ ಪೊಲೀಸರು ಸಿಸಿ ಕ್ಯಾಮರಗಳ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಅಂಗಡಿ ಮಾಲೀಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ