ಅಚ್ಚರಿಯ ಘಟನೆ: ಪಶು ಆಸ್ಪತ್ರೆಗೆ ಬಂದು ವೈದ್ಯರಿಗೆ ಗಾಯ ತೋರಿಸಿ ಚಿಕಿತ್ಸೆ ಪಡೆದ ಕೋತಿ! - Mahanayaka

ಅಚ್ಚರಿಯ ಘಟನೆ: ಪಶು ಆಸ್ಪತ್ರೆಗೆ ಬಂದು ವೈದ್ಯರಿಗೆ ಗಾಯ ತೋರಿಸಿ ಚಿಕಿತ್ಸೆ ಪಡೆದ ಕೋತಿ!

monkey visits hospital
23/05/2025

ಬಾಗಲಕೋಟೆ: ಕೋತಿಯೊಂದು ಪಶು ಆಸ್ಪತ್ರೆಗೆ ಆಗಮಿಸಿ ತನಗೆ ಆಗಿರುವ ಗಾಯವನ್ನು ತೋರಿಸಿ ಔಷಧಿ ಹಾಕಿಸಿಕೊಂಡು ಹೋಗಿರುವ ಅಪರೂಪದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಗಲಕೋಟೆ ಜಿಲ್ಲೆ ಇಲಕಲ್ ತಾಲೂಕಿನ ಗುಡೂರ ಗ್ರಾಮದ ಪಶು ಆಸ್ಪತ್ರೆಗೆ ಕೋತಿ ಆಗಮಿಸಿದೆ. ಕೋತಿ ಬಂದಿರುವುದನ್ನು ನೋಡಿದ ಪಶುವೈದ್ಯರು ಹೊರ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಬೈಕ್ ಮೇಲೇರಿದ ಕೋತಿ  ತನ್ನ ಬಾಲದ ಕೆಳಭಾಗದಲ್ಲಿ ಗಾಯವಾಗಿರುವುದನ್ನು ವೈದ್ಯರಿಗೆ ತೋರಿಸಿದೆ. ತಕ್ಷಣವೇ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ.ಬಿಲ್ಲೊರ ಕೋತಿಗೆ ಚಿಕಿತ್ಸೆ ನೀಡಿದ್ದಾರೆ.

ಕೋತಿ ತನಗೆ ಇಲ್ಲಿ ಗಾಯವಾಗಿದೆ ಎಂದು ಸನ್ನೆ ಮಾಡಿ ತೋರಿಸಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ  ವೈದ್ಯ ಜಿ.ಜಿ.ಬಿಲ್ಲೊರ, ಚಿಕಿತ್ಸೆ ಪೂರ್ತಿಯಾಗುವವರೆಗೆ ಮಂಗ ತಾನಾಗೆ ಅಡ್ಡ ಮಲಗಿ ಸಹಕಾರ ನೀಡಿದೆ. ಮರದ ಮೇಲ್ಗಡೆ ಇನ್ನಷ್ಟು ಮಂಗಗಳಿದ್ದವು. ಅವುಗಳು ಇವೆಲ್ಲವನ್ನೂ ಗಮನಿಸುತ್ತಿದ್ದವು. ಆದರೆ, ಅದ್ಯಾವುದೂ ನನಗೆ ತೊಂದರೆ ಕೊಟ್ಟಿಲ್ಲ. ಮೂಕಪ್ರಾಣಿ ಜಾನುವಾರುಗಳಿಗೆ ನಾನು ಚಿಕಿತ್ಸೆ ನೀಡಿದ್ದೇನೆ. ಆದರೆ ಈಗ ಆಂಜನೇಯ ಸ್ವರೂಪಿಯಾದ ಮಂಗ, ತಾನೇ ಸ್ವತಃ ಬಂದು ನನ್ನಿಂದ ಚಿಕಿತ್ಸೆ ಪಡೆದಿದೆ. ಹಾಗಾಗಿ ನಾನೂ ಪುಣ್ಯವಂತ ಅಂತ ಭಾವಿಸಿದ್ದೇನೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ