ಬೆಣಗಾಲು: SSLC / PUC ಮುಗಿದ ನಂತರ ಮುಂದೇನು?: ವಿಚಾರ ಸಂಕಿರಣ - Mahanayaka

ಬೆಣಗಾಲು: SSLC / PUC ಮುಗಿದ ನಂತರ ಮುಂದೇನು?: ವಿಚಾರ ಸಂಕಿರಣ

benagalu
23/05/2025

ಬೆಣಗಾಲು: SSLC / PUC ಮುಗಿದ ನಂತರ ಮುಂದೇನು? ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ಮಹಾಚೇತನ ಯುವ ವೇದಿಕೆಯು ಡಾ.ಬಿ.ಆರ್.ಅಂಬೇಡ್ಕರ್ ರವರ ಪೇ ಬ್ಯಾಕ್ ಟು ಸೊಸೈಟಿ  ಎಂಬ ಆಶಯದಂತೆ ನಡೆಸಲಾಯಿತು.

“ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮುಗಿದ ನಂತರ ಮುಂದೇನು?” ಎಂಬ ವಿಷಯದ ಕುರಿತು ವಿಚಾರ ಸಂಕಿರಣವನ್ನು ರಾಜೇಶ್ ಸಿ.ಎಂ., ಉಪನ್ಯಾಸಕರು, ಸರ್ಕಾರಿ ಪಾಲಿಟೆಕ್ನಿಕ್ ಕುಶಾಲನಗರ ರವರು ಗ್ರಾಮೀಣ ಮಟ್ಟದಲ್ಲಿ ಲ್ಯಾಪ್ಟಾಪ್ ಮತ್ತು ಪ್ರೊಜೆಕ್ಟರ್ ಬಳಸಿ, ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ  ವಿದ್ಯಾರ್ಥಿಗಳಿಗೆ ಸರಳ ರೀತಿಯಲ್ಲಿ  ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮುಗಿದ ನಂತರ ಇರುವಂತಹ ವಿವಿಧ ರೀತಿಯ ವಿದ್ಯಾಭ್ಯಾಸದ ಅವಕಾಶಗಳು / ವೃತ್ತಿಪರ ಕೋರ್ಸ್ ಗಳ ಕುರಿತು ಸುದೀರ್ಘವಾಗಿ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರ ಸಂಕಿರಣವನ್ನು ನಡೆಸಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆ ಬಿಟ್ಟವರಿಗೆ ಅನುಕೂಲವಾಗುವಂತಹ ಕೋರ್ಸ್ ಗಳನ್ನು ಕೂಡ ತಿಳಿಸಿ ಹೇಳಲಾಯಿತು.

ಈ ಸಂದರ್ಭದಲ್ಲಿ ಇಂಜಿನಿಯರ್ ವಿಜಯ್ ಕುಮಾರ್ ಅವರು ಉಪಸ್ಥಿತರಿದ್ದರು ಹಾಗೂ ವಿದ್ಯಾರ್ಥಿಗಳಾದ ಸಾನ್ಯ, ರಕ್ಷಿತಾ, ಮೌಲ್ಯ, ಐಶ್ವರ್ಯ, ರೋಹಿತ್ ಬಿ.ಜೆ., ಆಕಾಶ್ ಬಿ.ಆರ್., ಶರತ್, ಕಿಶೋರ್, ಪವನ್ ಬಿ.ಆರ್., ಪ್ರಶಾಂತ್,  ಡೀನ, ಯೋಕ್ಷ, ಶಂಬಾವಿ, ದಿನೇಶ್, ಸೋನಿತ್, ಶ್ರೀಹಾನ್, ಪ್ರಣವರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಹಾಚೇತನ ಯುವ ವೇದಿಕೆ ಬೆಣಗಾಲು ಗ್ರಾಮ ಪಿರಿಯಾಪಟ್ಟಣ ತಾಲೂಕು ವತಿಯಿಂದ ಸಾವಿತ್ರಿಬಾಯಿ ಫುಲೆ ಪಾಠ ಶಾಲಾ ಕೊಠಡಿ, ಡೈರಿ ಹಿಂಬಾಗ ಬೆಣಗಾಲು ಇಲ್ಲಿ ಆಯೋಜಿಸಿದ್ದರು.

ಕಾರ್ಯಕ್ರಮಕ್ಕೆ ಮಹಾಚೇತನ ತಂಡ, ಬೆಣಗಾಲು ಗ್ರಾಮಸ್ಥರು, ಮುಖಂಡರು ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಈ ಒಂದು ವಿಚಾರ ಸಂಕಿರಣವನ್ನು ತಾಲೂಕಿನ ಯಾವುದೇ ಶಾಲಾ ಕಾಲೇಜುಗಳಲ್ಲಿ, ಹಳ್ಳಿಗಳಲ್ಲಿ ಅಥವಾ ಕೇರಿಗಳಲ್ಲಿ ಉಚಿತವಾಗಿ ನಡೆಸಿಕೊಡಲು ಮಹಾಚೇತನ ಯುವ ವೇದಿಕೆ ತಂಡವು ಸದಾ ಸಿದ್ದವಿರುತ್ತದೆ ಎಂದು ಮುಖ್ಯ ಸಂಯೋಜಕರಾದ ರಾಜೇಶ್ ಸಿ.ಎಮ್. ಇದೇ ವೇಳೆ ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ