ಕೊವಿಡ್ 19 ಪಾಸಿಟಿವ್ ಆಗಿದ್ದ ಸ್ಮೃತಿ ಇರಾನಿ ಅವರ ಆರೋಗ್ಯ ಸ್ಥಿತಿ ಏನಾಗಿದೆ ಗೊತ್ತಾ? - Mahanayaka
12:10 AM Tuesday 16 - September 2025

ಕೊವಿಡ್ 19 ಪಾಸಿಟಿವ್ ಆಗಿದ್ದ ಸ್ಮೃತಿ ಇರಾನಿ ಅವರ ಆರೋಗ್ಯ ಸ್ಥಿತಿ ಏನಾಗಿದೆ ಗೊತ್ತಾ?

12/11/2020

ನವದೆಹಲಿ: ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಅಕ್ಟೋಬರ್ 28ರಂದು ಸ್ಮೃತಿ ಇರಾನಿ ಅವರು ಕೊವಿಡ್ ಪರೀಕ್ಷೆಗೊಳಪಟ್ಟಿದ್ದು, ಈ ವೇಳೆ ಅವರಿಗೆ ಕೊರೊನಾ ಪಾಸಿಟಿವ್  ವರದಿ ಬಂದಿತ್ತು. ಇದೀಗ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ.


Provided by

ಈ ಬಗ್ಗೆ ಸ್ವತಃ ಸ್ಮೃತಿ ಇರಾನಿಯವರೇ ಟ್ವೀಟ್ ಮಾಡಿದ್ದು, ತಾನು ಗುಣಮುಖವಾಗಿದ್ದು, ಶೀಘ್ರವೇ ಕರ್ತವ್ಯಕ್ಕೆ ಹಾಜರಾಗುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ನನ್ನ ಚೇತರಿಕೆಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.

ನನಗೆ ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಹೇಳಿರುವ ಸ್ಮೃತಿ ಇರಾನಿ,  ತಾನು ಶೀಘ್ರವೇ ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ