ಐಎಎಸ್ ಆಕಾಂಕ್ಷಿಯ ಕೋಣೆಯಲ್ಲಿ ಸ್ಪೈ ಕ್ಯಾಮೆರಾ ಪತ್ತೆ: ಭೂಮಾಲೀಕನ ಮಗನ ಬಂಧನ - Mahanayaka

ಐಎಎಸ್ ಆಕಾಂಕ್ಷಿಯ ಕೋಣೆಯಲ್ಲಿ ಸ್ಪೈ ಕ್ಯಾಮೆರಾ ಪತ್ತೆ: ಭೂಮಾಲೀಕನ ಮಗನ ಬಂಧನ

24/09/2024


Provided by

ದೆಹಲಿಯ ಶಕರ್ಪುರ ಪ್ರದೇಶದಲ್ಲಿ ಯುಪಿಎಸ್ಸಿ ಮಹಿಳಾ ಆಕಾಂಕ್ಷಿಯ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಹಸ್ಯವಾಗಿ ಸ್ಪೈ ಕ್ಯಾಮೆರಾಗಳನ್ನು ಆಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆ ದೆಹಲಿಯಲ್ಲಿ ಬಾಡಿಗೆದಾರಳಾಗಿ ವಾಸಿಸುತ್ತಿದ್ದಳು. ಇನ್ನು ಆರೋಪಿಯನ್ನು ಆಕೆಯ ಭೂಮಾಲೀಕನ ಮಗ ಕರಣ್ ಎಂದು ಗುರುತಿಸಲಾಗಿದೆ. ಮಹಿಳೆಯು ಈ ಗುಪ್ತ ಸಾಧನಗಳನ್ನು ಕಂಡುಹಿಡಿದು ಪೊಲೀಸರಿಗೆ ನೀಡಿದ ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ತನ್ನ ವಾಟ್ಸಾಪ್ ಖಾತೆಯಲ್ಲಿ ಅಸಾಮಾನ್ಯ ಚಟುವಟಿಕೆಯನ್ನು ಗಮನಿಸಿದ ನಂತರ ಅನುಮಾನಗೊಂಡಿದ್ದಾಳೆ. ಅವಳು ತನ್ನ ಲಿಂಕ್ ಮಾಡಿದ ಸಾಧನಗಳನ್ನು ಪರಿಶೀಲಿಸಿದಾಗ ತನ್ನ ಖಾತೆಯನ್ನು ಅಪರಿಚಿತ ಲ್ಯಾಪ್ ಟಾಪ್‌ನಿಂದ ಹ್ಯಾಕ್‌ ಮಾಡಲಾಗಿದೆ ಎಂದು ಅವಳು ಕಂಡುಕೊಂಡಿದ್ದಾಳೆ.

ಹೀಗಾಗಿ ಅವಳು ಅಪಾರ್ಟ್ಮೆಂಟನ್ನು ಪರಿಶೀಲಿಸಿದಾಗ ಅವಳ ಸ್ನಾನಗೃಹದ ಬಲ್ಬ್ ಹೋಲ್ಡರ್ ಒಳಗೆ ಸ್ಪೈ ಕ್ಯಾಮೆರಾವನ್ನು ಇಟ್ಟಿರುವುದು ಬಯಲಾಗಿದೆ.
ಈ ಕುರಿತು ಯುವತಿಯು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆಗ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಬಂದಿದ್ದಾರೆ. ಆಗ ಯುವತಿ ಮಲಗುವ ಕೋಣೆಯ ಬಲ್ಬ್ ಹೋಲ್ಡರ್ ನಲ್ಲಿ ಅಡಗಿರುವ ಮತ್ತೊಂದು ಸ್ಪೈ ಕ್ಯಾಮೆರಾವನ್ನು ಪತ್ತೆಹಚ್ಚಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ