ಭಾರತ ಪಾಕಿಸ್ತಾನ ಏಕದಿನ ವಿಶ್ವಕಲಪ್ ಟೂರ್ನಿ: ಬಿಸಿಸಿಐನಿಂದ 14,000 ಟಿಕೆಟ್‌ಗಳ ಬಿಡುಗಡೆ - Mahanayaka
1:44 AM Thursday 23 - October 2025

ಭಾರತ ಪಾಕಿಸ್ತಾನ ಏಕದಿನ ವಿಶ್ವಕಲಪ್ ಟೂರ್ನಿ: ಬಿಸಿಸಿಐನಿಂದ 14,000 ಟಿಕೆಟ್‌ಗಳ ಬಿಡುಗಡೆ

08/10/2023

ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 14,000 ಟಿಕೆಟ್‌ಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರವಿವಾರ ಬಿಡುಗಡೆ ಮಾಡಿದೆ.

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಪಂದ್ಯಕ್ಕೆ ಟಿಕೆಟ್‌ ಬೇಡಿಕೆ ಹೆಚ್ಚಾಗಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಟಿಕೆಟ್‌ ಖರೀದಿಗೆ ಅವಕಾಶವಿದೆ ಎಂದು ಬಿಸಿಸಿಐ ತಿಳಿಸಿದೆ.

1,30,000ಕ್ಕೂ ಹೆಚ್ಚು ಅಸನ ಸೌಲಭ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅ. 5ರಂದು ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು 47 ಸಾವಿರ ಮಂದಿ ವೀಕ್ಷಿಸಿದ್ದರು.

ಚೆನ್ನೈನಲ್ಲಿ ರವಿವಾರ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಭಾರತ ವಿಶ್ವಕಪ್ ಪಂದ್ಯವನ್ನು ಆರಂಭಿಸಿದೆ. ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವು ನೆದರ್ ಲ್ಯಾಂಡ್ಸ್ ವಿರುದ್ಧ ಜಯ ದಾಖಲಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿತ್ತು.

ಅಕ್ಟೋಬರ್ 8, 2023 ರಂದು ಮಧ್ಯಾಹ್ನ 12 ಗಂಟೆಯಿಂದ ಪಂದ್ಯದ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಅಭಿಮಾನಿಗಳು ಅಧಿಕೃತ ಟಿಕೆಟಿಂಗ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಟಿಕೆಟ್ ಖರೀದಿಸಬಹುದು.

ಇತ್ತೀಚಿನ ಸುದ್ದಿ