ಬಿಜೆಪಿಯಲ್ಲಿ ಈಗ ಸಿದ್ಧಾಂತಕ್ಕೆ ಬೆಲೆ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ - Mahanayaka
10:56 PM Tuesday 16 - December 2025

ಬಿಜೆಪಿಯಲ್ಲಿ ಈಗ ಸಿದ್ಧಾಂತಕ್ಕೆ ಬೆಲೆ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

d k shivakumar
27/03/2024

ಗೋಕರ್ಣ:  ಬಿಜೆಪಿಯಲ್ಲಿ ಈಗ ಸಿದ್ಧಾಂತಕ್ಕೆ ಬೆಲೆ ಇಲ್ಲ, ಪಕ್ಷಕ್ಕಾಗಿ ದುಡಿದವರು ಈಗ ಮನೆಯಲ್ಲಿದ್ದಾರೆ, ಸಿದ್ಧಾಂತ ಇಲ್ಲದ ಹೊರಗಿನವರೇ ಈಗ ಬಿಜೆಪಿಯಲ್ಲಿ ಆಳುವವರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡದ ಮಾಸ್ ಲೀಡರ್ ಅನ್ನೇ ಇಂದು ಮನೆಗೆ ಕಳುಹಿಸಿದ್ದಾರೆ ಎಂದು ಅನಂತ್ ಕುಮಾರ್ ಹೆಗಡೆ ಹೆಸರು ಪ್ರಸ್ತಾಪಿಸದೇ ಡಿ.ಕೆ.ಶಿವಕುಮಾರ್ ಬಿಜೆಪಿಯನ್ನು ಟೀಕಿಸಿದರು.

ಕರ್ನಾಟಕದಲ್ಲಿ ಎಲ್ಲಿಯೂ ಬಿಜೆಪಿಯ ಗಾಳಿಯಿಲ್ಲ, ಎಲ್ಲ ಕಡೆ ಕಾಂಗ್ರೆಸ್ ಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿಯೂ ಕಾಂಗ್ರೆಸ್ ನ ವಾತಾವರಣವಿದೆ. ಅದೇ ಕಾರಣದಿಂದಾಗಿ ಮೋದಿ ಈಗ ಗ್ಯಾರೆಂಟಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಶಿವರಾಮ ಹೆಬ್ಬಾರ ಕಾಂಗ್ರೆಸ್ ಗೆ ಬಂದರೆ, ಪಕ್ಷ ಅವರನ್ನು ಸೇರಿಸಿಕೊಳ್ಳಲಿದೆ. ಯಾರು ವಿರೋಧ ಮಾಡಿದರೂ ಪಕ್ಷದ ತೀರ್ಮಾನವೇ ಅಂತಿಮ ಎಂದು ಇದೇ ವೇಳೆ ಅವರು ತಿಳಿಸಿದರು.

ಇನ್ನೂ ಜೆಡಿಎಸ್ ವಿರುದ್ಧ ಇದೇ ವೇಳೆ ವಾದ್ದಾಳಿ ನಡೆಸಿದ ಅವರು,  ಜೆಡಿಎಸ್ ಕೋಮುವಾದಿಗಳ ಜೊತೆಗೆ ಕೈಜೋಡಿಸಿದ ಅಪ್ಪ ಮಕ್ಕಳ ಪಕ್ಷವಾಗಿದೆ. ಅವರ ಬಗ್ಗೆ ಮಾತನಾಡುವುದು ವ್ಯರ್ಥ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ