ಕರ್ನಾಟಕ 40% ಭ್ರಷ್ಟವಾಗಿದ್ರೆ ಮಹಾರಾಷ್ಟ್ರ ಸರ್ಕಾರ 100% ಭ್ರಷ್ಟ: ಆದಿತ್ಯ ಠಾಕ್ರೆ ಟೀಕೆ

ಮಹಾರಾಷ್ಟ್ರದ ಬಿಜೆಪಿ-ಶಿವಸೇನಾ-ಎನ್ ಸಿಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯುವಸೇನಾ ನಾಯಕ ಆದಿತ್ಯ ಠಾಕ್ರೆ, ಮಹಾರಾಷ್ಟ್ರದಲ್ಲಿ ಸದ್ಯ ಓರ್ವ ಮುಖ್ಯಮಂತ್ರಿ ಮತ್ತು ಇಬ್ಬರು “ಅರ್ಧ” ಉಪಮುಖ್ಯಮಂತ್ರಿಗಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಕಾನ್ ಕ್ಲೇವ್ ನ 2 ನೇ ದಿನದಂದು ಮಾತನಾಡಿದ ಆದಿತ್ಯ ಠಾಕ್ರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಸಾಮೂಹಿಕ ಪಕ್ಷಾಂತರದ ನಂತರ ಎಂವಿಎ ಮೈತ್ರಿ ದುರ್ಬಲವಾಗಿದೆಯೇ ಎಂಬ ಪ್ರಶ್ನೆಗೆ ಈ ರೀತಿಯಲ್ಲಿ ಉತ್ತರಿಸಿದರು.
ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಎರಡು ಬಾರಿ ವಿಮಾನ ವಿಳಂಬವಾಗಿತ್ತು. ಏಕೆಂದರೆ ಅವರು ದಿನವಿಡೀ ಚೆನ್ನಾಗಿ ನಿದ್ರೆ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು. ಶಿಂಧೆ ಅವರು ಇನ್ನೂ ಎಚ್ಚರಗೊಳ್ಳದ ಕಾರಣ ಸಮಾವೇಶಕ್ಕೆ ಹಾಜರಾಗಲು ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಮಹಾರಾಷ್ಟ್ರ ಸಿಎಂ ಇಂದು ಬೆಳಿಗ್ಗೆ ಸಮಾವೇಶವನ್ನುದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಅವರ ಅಧಿವೇಶನವನ್ನು ಮರು ನಿಗದಿಪಡಿಸಲಾಯಿತು ಎಂದರು.
ನನಗಿಂತ ಮೊದಲು ಸಿಎಂ ಸಮಾವೇಶದಲ್ಲಿ ಇರಬೇಕಿತ್ತು. ಆದರೆ ಅವರು ಇನ್ನೂ ಇಲ್ಲಿಲ್ಲ. ಏಕೆಂದರೆ ಅವರು ಇನ್ನೂ ನಿದ್ರೆಯಲ್ಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.