ಪ್ರಧಾನಿ ಮೋದಿ 75ನೇ ವರ್ಷಕ್ಕೆ ನಿವೃತ್ತಿ ಘೋಷಿಸದಿದ್ರೆ ಬೇರೆ ಮಾರ್ಗದಲ್ಲಿ ಕುರ್ಚಿ ಕಳೆದುಕೊಳ್ಳುತ್ತಾರೆ ಎಂದ ಬಿಜೆಪಿ ಹಿರಿಯ ನಾಯಕ - Mahanayaka
11:42 PM Thursday 21 - August 2025

ಪ್ರಧಾನಿ ಮೋದಿ 75ನೇ ವರ್ಷಕ್ಕೆ ನಿವೃತ್ತಿ ಘೋಷಿಸದಿದ್ರೆ ಬೇರೆ ಮಾರ್ಗದಲ್ಲಿ ಕುರ್ಚಿ ಕಳೆದುಕೊಳ್ಳುತ್ತಾರೆ ಎಂದ ಬಿಜೆಪಿ ಹಿರಿಯ ನಾಯಕ

21/08/2024


Provided by

ಆರ್‌ಎಸ್‌ಎಸ್‌ ನಿಯಮದಂತೆ ಪ್ರಧಾನಿ ಮೋದಿ 75ನೇ ವರ್ಷಕ್ಕೆ ನಿವೃತ್ತಿ ಘೋಷಿಸದಿದ್ದರೆ ಬೇರೆ ಮಾರ್ಗದಲ್ಲಿ ಕುರ್ಚಿ ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಸುಬ್ರಹ್ಮಣ್ಯಂ ಸ್ವಾಮಿ , ” ಮೋದಿಯವರು ಆರ್‌ಎಸ್‌ಎಸ್ ಪ್ರಚಾರಕನ ಸಂಸ್ಕಾರಕ್ಕೆ ಬದ್ಧರಾಗಿ ತಮ್ಮ 75 ನೇ ವರ್ಷದ ಹುಟ್ಟುಹಬ್ಬದ ನಂತರ ಸೆಪ್ಟೆಂಬರ್ 17 ರಂದು ನಿವೃತ್ತಿ ಘೋಷಿಸಬೇಕು. ಇಲ್ಲವಾದರೆ ಬೇರೆ ವಿಧಾನಗಳಿಂದ ತಮ್ಮ ಪ್ರಧಾನಿ ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ ” ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 1950 ಸೆಪ್ಟೆಂಬರ್‌ 17 ರಂದು ಜನಿಸಿದ್ದಾರೆ. 2024 ಸೆಪ್ಟೆಂಬರ್‌ 17 ಕ್ಕೆ 74 ವರ್ಷ ಪೂರ್ಣಗೊಂಡು 75 ನೇ ವರ್ಷಕ್ಕೆ ಕಾಲಿಡುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ನಿವೃತ್ತಿ ಬಗ್ಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ