ಉಲಮಾಗಳ ಮಾರ್ಗದರ್ಶನದಂತೆ ನಡೆದು ಕೊಂಡರೆ ಸಮುದಾಯಕ್ಕೇ ಲಾಭ | ಉಡುಪಿ ಜಿಲ್ಲಾ ಎಸ್ ವೈ ಎಸ್ ರಚನಾ ಸಭೆಯಲ್ಲಿ ಮೌಲಾನಾ ಚೊಕ್ಕಬೆಟ್ಟು - Mahanayaka

ಉಲಮಾಗಳ ಮಾರ್ಗದರ್ಶನದಂತೆ ನಡೆದು ಕೊಂಡರೆ ಸಮುದಾಯಕ್ಕೇ ಲಾಭ | ಉಡುಪಿ ಜಿಲ್ಲಾ ಎಸ್ ವೈ ಎಸ್ ರಚನಾ ಸಭೆಯಲ್ಲಿ ಮೌಲಾನಾ ಚೊಕ್ಕಬೆಟ್ಟು

ullamalla
01/02/2023

ಉಡುಪಿ: ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿಯು ಎರ್ಮಾಳ್ ಬಡ ಮದ್ರಸ ಹಾಲ್ ನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕೋಆರ್ಡಿನೇಟರ್ ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮೌಲಾನಾ ಚೊಕ್ಕಬೆಟ್ಟು, ಇಸ್ಲಾಂ ಧರ್ಮದ ನೀತಿ,ನಿಯಮಗಳನ್ನು ಆಯಾ ಸಂಧರ್ಭಕ್ಕನುಗುಣವಾಗಿ, ಸಮುದಾಯದ ಅಭಿವೃದ್ದಿಯನ್ನು ಮಾತ್ರ ಗುರಿಯಾಗಿಟ್ಟುಕೊಂಡು ಮಾರ್ಗದರ್ಶನ ನೀಡುತ್ತಿರುವ ಉಲಮಾಗಳನ್ನು ಜನರು ಅನುಕರಿಸಿದರೆ ಮಾತ್ರ ಸಮುದಾಯಕ್ಕೆ ಅಭಿವೃದ್ದಿಪಥದಲ್ಲಿ ಮುಂದುವರೆಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ S.B. ಮುಹಮ್ಮದ್ ದಾರಿಮಿ, ಕಾಲದ ಗೋಡೆ ಬರಹವನ್ನು ಓದಿಕೊಂಡು ಧರ್ಮದ ಮೂಲ ಆಶಯಕ್ಕೆ ದಕ್ಕೆಯಾಗದಂತೆ ವಿನೂತನ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮಾನವೀಯ ಕಳಕಳಿಯನ್ನು ಮುಖ್ಯ ಅಜಂಡಾವಾಗಿಟ್ಟುಕೊಂಡು ಸಂಘಟನೆಗಳು ಕಾರ್ಯಚರಿಸಿದರೆ, ಮಾತ್ರ ಸಂಘ ಸಂಸ್ಥೆಗಳಿಂದ ಮಾನವ ಕುಲಕ್ಕೆ ಒಳಿತಾಗಲಿದ್ದು, ಕೇವಲ ದ್ವೇಷಾಸೂಯೆಗಳಿಗಾಗಿ ಮತ್ತು ರಾಜಕೀಯ ಮೇಲಾಟಕ್ಕಾಗಿ ಇರುವ ಸಂಘಟನೆಗಳಿಂದ ಸಮುದಾಯಕ್ಕೆ ಕೆಡುಕಲ್ಲದೇ ಯಾವುದೇ ಪ್ರಯೋಜನ ಉಂಟಾಗದು ಎಂದು ಹೇಳಿದರು.

SYS ಕೇಂದ್ರ ಸಮಿತಿಯ ಸದಸ್ಯರಾದ ಹಕೀಂ ಪರ್ತ್ತಿಪ್ಪಾಡಿ ಉಪಸ್ಥಿತರಿದ್ದರು. ಎರ್ಮಾಳ್ ಮಸೀದಿ ಖತೀಬರಾದ ಶಬೀರ್ ಫೈಝಿ ಯವರ ದುಅಃ ದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾ SYS ನೂತನ ಸಮಿತಿಯ ಅಧ್ಯಕ್ಷರಾಗಿ, ಎಂ.ಪಿ ಮೊಯ್ದಿನಬ್ಬ ಹಾಜಿ ಪಲಿಮಾರು, ಉಪಾಧ್ಯಕ್ಷರಾಗಿ,ಶಬೀರ್ ಫೈಝಿ ಎರ್ಮಾಳ್, ಅಬ್ದುರ್ರಹ್ಮಾನ್ ಕುಚ್ಚಿಕ್ಕಾಡ್,ಇಜ್ಜಬ್ಬ ಹಾಜಿ ಎರ್ಮಾಳ್, ಮೊಹಮ್ಮದ್ ಪಣಿಯೂರು ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಫೈಝಿ ರೆಂಜಾಳ, ಜೊತೆ ಕಾರ್ಯದರ್ಶಿಯಾಗಿ ರಿಯಾಝ್ ಫೈಝಿ ಪಲಿಮಾರು, ಅಝೀಝ್ ಕಾಂಜರಕಟ್ಟೆ, ಕೋಶಾಧಿಕಾರಿಯಾಗಿ, ಅಬ್ದುರ್ರಹ್ಮಾನ್ ಹಾಜಿ ಕನ್ನಂಗಾರು, ಸಂಘಟನಾ ಕಾರ್ಯದರ್ಶಿಯಾಗಿ, ಮೊಹಿಯುದ್ದೀನ್ ರೆಂಜಾಳ, ಲೆಕ್ಕಪರಿಶೋಧಕರಾಗಿ ಹಮ್ಮಬ್ಬ ಹಾಜಿ ಪಡುಬಿದ್ರೆ, ಆಯ್ಕೆಮಾಡಲಾಯಿತು.

ಸದಸ್ಯರಾಗಿ, ಫಾರೂಕ್ ಹನೀಫಿ ನಿಟ್ಟೆ, ಹಾರೀಸ್ ಅಝ್ಹರಿ ಕಾಂಜರಕಟ್ಟೆ, ಸಿದ್ದೀಖ್ ಫೈಝಿ ಪಣಿಯೂರು, ಶರೀಫ್ ಫೈಝಿ ಎರ್ಮಾಳ್, ನಿಝಾರ್ ಫೈಝಿ , ಮುಹಮ್ಮದ್ ಅಶ್ರಫ್, ಉಮರಬ್ಬ ಕಾಂಜರಕಟ್ಟೆ, K.S ಉಮರ್ ಕಾಂಜರಕಟ್ಟೆ, ಕಾಸಿಂ K ,ಯಾಕೂಬ್, K ಝಾಕಿರ್ ಹುಸೈನ್, K ಅಬ್ದುಲ್ ರಹ್ಮಾನ್, ಇದ್ದಿನಬ್ಬ ಕನ್ನಂಗಾರ್ ಇವರುಗಳನ್ನು ಒಳಗೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ