ಭಾರತದಲ್ಲಿ ಹೊಸ ಮೊಬೈಲ್ ಗಿಂತ, ಹಳೆಯ ಮೊಬೈಲ್ ಖರೀದಿಸುವವರೇ ಹೆಚ್ಚಂತೆ!: ಯಾಕೆ ಹೀಗೆ?
ಬೆಂಗಳೂರು: ಭಾರತದಲ್ಲಿ ಹೊಸ ಫೋನ್ ಗಳಿಂತ ಹೆಚ್ಚು, ಬಳಸಿದ ಫೋನ್ ಗಳಿಗೆ ಬೇಡಿಕೆ ಹೆಚ್ಚಾಗಿದೆಯಂತೆ. ಹೀಗಂತ ಐಡಿಸಿಯ ಅಧ್ಯಯನ ತಿಳಿಸಿದೆ. 2024ರಲ್ಲಿ ಸುಮಾರು 20 ದಶಲಕ್ಷ ಬಳಸಿದ ಸ್ಮಾರ್ಟ್‌ಫೋನ್ ಗಳು ಮಾರಾಟವಾಗಿದೆಯಂತೆ.
ವರ್ಷದಿಂದ ವರ್ಷಕ್ಕೆ ಇದು ಶೇಕಡ 9.6ರಷ್ಟು ಪ್ರಗತಿಯಾಗಿದೆ. ಇದು ಹೊಸ ಸ್ಮಾರ್ಟ್‌ಫೋನ್ಗಳ ಮಾರಾಟದ ಪ್ರಗತಿಗಿಂತಲೂ ಹೆಚ್ಚಾಗಿದೆ. ಹೊಸ ಫೋನ್ ಗಳ ಮಾರಾಟ 154 ದಶಲಕ್ಷ ತಲುಪಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಪ್ರಗತಿ ಶೇಕಡ 5.5ಷ್ಟಿದೆ. 5ಜಿ ಫೋನ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಐಫೋನ್‌ನಂತಹ ಪ್ರೀಮಿಯಂ ಫೋನ್ ಗಳನ್ನು ಖರೀದಿಸಲು ಹೆಚ್ಚಾದ ಆಸಕ್ತಿಯೂ ಬಳಸಿದ ಫೋನ್ಗಳ ಬೇಡಿಕೆ ಹೆಚ್ಚಿಸಿದೆ ಎಂದು ಐಡಿಸಿ ತಿಳಿಸಿದೆ.
ಅತ್ಯಧಿಕ ಗುಣಮಟ್ಟದ ಹೊಸ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವವರಿಗಿಂತ, ಬಳಸಿದ ಹಾಗೂ ರಿಪರ್ಬಿಷ್ಡ್ ಸ್ಮಾರ್ಟ್‌ಫೋನ್ ಗಳನ್ನು ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಇಂತಹ ಟ್ರೆಂಡ್ ಹೆಚ್ಚಳವಾಗುತ್ತಿದೆಯಂತೆ. ಹಳೆಯ ಸ್ಮಾರ್ಟ್‌ಫೋನ್ಗಳ ಮಾರಾಟ ಶೇಕಡ 9.6ರಷ್ಟು ಹೆಚ್ಚಾಗಿದೆ.
5G ಜನಪ್ರಿಯತೆ ಹೆಚ್ಚುತ್ತಿರುವುದು ಹಳೆಯ ಫೋನ್ ಗಳ ಬೇಡಿಕೆ ಹೆಚ್ಚಲು ಕಾರಣವಾದ ಮಹತ್ವದ ಅಂಶವಾಗಿದೆ. ಭಾರತದಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರರು 5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದಾರೆ. 4G ಮತ್ತು 5G ಸ್ಮಾರ್ಟ್‌ಫೋನ್ಗಳ ನಡುವಿನ ಹೆಚ್ಚಿನ ಬೆಲೆಯ ಅಂತರವನ್ನು ಗಮನಿಸಿದರೆ, ಹೆಚ್ಚಿನ ಗ್ರಾಹಕರು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಾರೆ.
ಭಾರತೀಯ ಬಳಸಿದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಮುಂದಿನ ಐದು ವರ್ಷಗಳಲ್ಲಿ ಶೇಕಡ 8ರಷ್ಟು ಪ್ರಗತಿ ಕಾಣಲಿದೆ, 2028 ರ ವೇಳೆಗೆ ವಾರ್ಷಿಕ 26.5 ದಶಲಕ್ಷ ಯುನಿಟ್‌ಗಳನ್ನು ತಲುಪುತ್ತದೆ ಎಂದು ಐಡಿಸಿ ಊಹಿಸಿದೆಯಂತೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: