ಮಂಗಳೂರಿನಲ್ಲೂ ಆಭರಣ ಮಳಿಗೆ ಮಾಲಕರ ಮನೆ, ವಿವಿಧ ಮಳಿಗೆಗಳ ಮೇಲೆ ಐಟಿ ದಾಳಿ - Mahanayaka
11:29 AM Friday 19 - December 2025

ಮಂಗಳೂರಿನಲ್ಲೂ ಆಭರಣ ಮಳಿಗೆ ಮಾಲಕರ ಮನೆ, ವಿವಿಧ ಮಳಿಗೆಗಳ ಮೇಲೆ ಐಟಿ ದಾಳಿ

it raid
31/10/2023

ಮಂಗಳೂರಲ್ಲಿರುವ ಚಿನ್ನಾಭರಣಗಳ ಮಳಿಗೆ ಆಭರಣ ಜ್ಯುವೆಲ್ಲರ್ಸ್ ಇದರ ವಿವಿಧ ಮಳಿಗೆ, ಮಾಲಕರ ಮನೆಯ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.

ಉಡುಪಿ & ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ ನಲ್ಲಿರುವ ಮಳಿಗೆಗಳಿಗೆ ಏಕಕಾಲದಲ್ಲಿ ದಾಳಿ ನಡೆದಿದೆ. ಎಲ್ಲಾ ಮಳಿಗೆಗಳಿಗೆ ಬೀಗ ಹಾಕಿ ಒಳಗಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವುದು ತಿಳಿದುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿದೆ.

ಐದಾರು ಜನ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಆಭರಣ ಜ್ಯುವೆಲ್ಲರಿ ಕರ್ನಾಟಕದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಮಳಿಗೆಗಳನ್ನು ಹೊಂದಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಹಾಗೂ ಕೊಟ್ಟಾರದಲ್ಲಿ ಮಳಿಗೆಗಳಿದ್ದು, ಉಡುಪಿಯ ಹಲವಡೆ ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ. ಐಟಿ ರೇಡ್ ನಡೆದಿದ್ದು ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ