ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ 10ರಲ್ಲಿ 10 ಅಂಕ: ಆಸ್ಟ್ರೇಲಿಯಾದ ಮಾಜಿ ಪ್ರಧಾನಿಯಿಂದ ಘೋಷಣೆ - Mahanayaka

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ 10ರಲ್ಲಿ 10 ಅಂಕ: ಆಸ್ಟ್ರೇಲಿಯಾದ ಮಾಜಿ ಪ್ರಧಾನಿಯಿಂದ ಘೋಷಣೆ

03/02/2024

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ 10ರಲ್ಲಿ 10 ಅಂಕ ನೀಡಿದ್ದಾರೆ.

ತಮ್ಮ ಪತ್ನಿಯೊಂದಿಗೆ ಭಾರತ ಪ್ರವಾಸದಲ್ಲಿರುವ ಮಾಲ್ಕಮ್ ಟರ್ನ್‌ಬುಲ್ ಜೈಪುರ 17ನೇ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತ ಪ್ರವಾಸ ನನಗೆ ಅತ್ಯಂತ ಸುಂದರವಾದ ಅನುಭವ.ಇತ್ತೀಚೆಗೆ ಜಪಾನ್‌ನಲ್ಲಿ ನಮ್ಮ ಹಳೆಯ ಸ್ನೇಹಿತ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿದೆ. ಅವರೊಂದು ದೊಡ್ಡ ಬದಲಾವಣೆಯನ್ನೇ ತಂದಿದ್ದಾರೆ ಎಂದು ಹೇಳಿದರು.

ಮೋದಿಯವರ ಒಡನಾಟ ಅಗಾಧ ಆನಂದದಾಯಕವಾಗಿತ್ತು. ಹೊರಗಿನಿಂದ ಅವರು ಸ್ಪೂರ್ತಿದಾಯಕ ನಾಯಕ ಮತ್ತು ಸ್ಪಷ್ಟವಾಗಿ ದೊಡ್ಡ ಬದಲಾವಣೆಯನ್ನು ಮಾಡುತ್ತಿದ್ದಾರೆ ಎಂದರು.

ಉದ್ಯಮಿಯೂ ಆಗಿರುವ ಮಾಲ್ಕಮ್ ಟರ್ನ್‌ಬುಲ್, ಉಭಯ ದೇಶಗಳ ನಡುವಿನ ಸಾಮ್ಯತೆಗಳ ಬಗ್ಗೆ ಮಾತನಾಡಿ, ಎರಡೂ ದೇಶಗಳು ಅನೇಕ ವಿಷಯಗಳನ್ನು ಹೊಂದಿವೆ. ಕ್ರಿಕೆಟ್ ಮೇಲಿನ ಪ್ರೀತಿ, ಕಾನೂನು ಮತ್ತು ಪ್ರಜಾಪ್ರಭುತ್ವ ಮತ್ತುಸ್ನೇಹ ಮನೋಭಾವಕ್ಕೆ ಹತ್ತರಲ್ಲಿ ಹತ್ತು ಅಂಕಗಳನ್ನು ಕೊಡಬಹುದು. ಆದರೆ ಒಂದೇ ಒಂದು ಸಮಸ್ಯೆಯೆಂದರೆ ನಾವು ಸಾಕಷ್ಟು ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸದೇ ಇರುವುದು ಎಂದು ಹೇಳಿದರು.

ಇತ್ತೀಚಿನ ಸುದ್ದಿ