ಕೆಲ ಮಾಧ್ಯಮಗಳು ಮುಸ್ಲಿಮರನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ: ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಹೇಳಿಕೆ

ದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಆಡಿರುವ ಮಾತು ಭಾರಿ ವೈರಲಾಗಿದೆ. ಮಾಧ್ಯಮಗಳ ನಿರ್ದಿಷ್ಟ ಮಂದಿ ಮುಸ್ಲಿಮರನ್ನು ದೇಶವಿರೋಧಿಗಳಂತೆ ಕ್ರೂರಿಗಳಂತೆ ಬಿಂಬಿಸುತ್ತಿರುವುದನ್ನು ಅವರು ಪ್ರಶ್ನಿಸಿದ್ದು ಈ ಸಂದರ್ಭದಲ್ಲಿ ವಿಡಿಯೋಗ್ರಾಫರ್ ಒಬ್ಬ ಸುಧೀರ್ ಚೌಧರಿಯನ್ನು ತೋರಿಸಿರುವುದು ಇಡೀ ಮಾಧ್ಯಮ ರಂಗದ ಪಕ್ಷಪಾತಿ ನೀತಿಗೆ ರೂಪಕದಂತಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ.
ಭಾರತದಲ್ಲಿ ಮುಸ್ಲಿಮರನ್ನು ಯೋಜನಾ ಬದ್ಧವಾಗಿ ಅಂಚಿಗೆ ತಳ್ಳಲಾಗುತ್ತಿದೆ. ದ್ವೇಷ ರಾಜಕೀಯ ಪ್ರಚಾರ ಮಾಡುವುದರಲ್ಲಿ ಮಾಧ್ಯಮಗಳು ಬಹಳ ದೊಡ್ಡ ಪಾತ್ರ ನಿರ್ವಹಿಸುತ್ತಿವೆ. ಅಬ್ ಕಿ ಬಾರ್ ಫೋರ್ ಹಂಡ್ರೆಡ್ ಫಾರ್ ಎಂದು ಒಂದು ಪಕ್ಷ ಘೋಷಿಸ್ತಾ ಇದೆ . ಆದರೆ ಆ ಪಕ್ಷದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಇಲ್ಲ, ಸಂಪುಟದಲ್ಲಿ ಕೂಡ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಮುಸ್ಲಿಂ ದ್ವೇಷ ಪ್ರಚಾರದಲ್ಲಿ ಮಾಧ್ಯಮಗಳು ತಮ್ಮ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು ಎಂದು ರಾಜ್ ದೀಪ್ ಸರ್ದೇಸಾಯಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಚಾನಲ್ ನ ಹತ್ತು ಹಲವು ಆಂಕರ್ ಗಳು ಭಾಗಿಯಾಗಿದ್ದರು. ಅದರಲ್ಲಿ ಮುಸ್ಲಿಂ ದ್ವೇಷ ಪ್ರಚಾರದಲ್ಲಿ ಮುಂಚೂಣಿಯಲ್ಲಿರುವ ಸುಧೀರ್ ಚೌದರಿ ಕೂಡ ಇದ್ದರು.
ರಾಜದೀಪ್ ಸರ್ದೇಸಾಯಿ ಅವರು ಹೀಗೆ ಮಾತಾಡ್ತಾ ಇರುವಾಗ ಸುಧೀರ್ ಚೌದರಿಯನ್ನು ಕ್ಯಾಮರಾ ಮೆನ್ ತೋರಿಸಿರುವುದನ್ನು ಸೋಶಿಯಲ್ ಮೀಡಿಯಾ ಎತ್ತಿಕೊಂಡಿದೆ ಮತ್ತು ಅತ್ಯಂತ ಸರಿಯಾಗಿ ಮತ್ತು ಸಮರ್ಪಕವಾಗಿ ಕ್ಯಾಮರವನ್ನು ತಿರುಗಿಸಲಾಗಿದೆ ಎಂದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth