ಹಿಂದಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಇಂಜಿನಿಯರ್ ! - Mahanayaka

ಹಿಂದಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಇಂಜಿನಿಯರ್ !

02/08/2023


Provided by

ವಿಡಿಯೋ ಕಾಲ್‌ ನಲ್ಲಿ ಸಾವಿನ ಸನಿಹದಲ್ಲಿರುವ ತನ್ನ ಸಂಬಂಧಿಯೊಂದಿಗೆ ಹಿಂದಿಯಲ್ಲಿ ಮಾತನಾಡಿದ ಹಿರಿಯ ಇಂಜಿನಿಯರ್‌ ಒಬ್ಬರನ್ನು ವಜಾಗೊಳಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಮೆರಿಕಾದ ಅಲಾಬಮದಲ್ಲಿರುವ ಮಿಸೈಲ್‌ ಡಿಫೆನ್ಸ್‌ ಕಾಂಟ್ರಾಕ್ಟರ್‌ ಜೊತೆಗೆ ದೀರ್ಘಕಾಲೀನ ಉದ್ಯೋಗಿಯಾಗಿದ್ದ ಅನಿಲ್‌ ವರ್ಶ್ನಿ ಅವರು ಕೆಲಸ ಕಳೆದುಕೊಂಡವರು.

ವರ್ಶ್ನೀ ಅವರು ಹಂಟ್ಸ್‌ವಿಲ್ಲೆ ಮಿಸೈಲ್‌ ಡಿಫೆನ್ಸ್‌ ಕಾಂಟ್ರಾಕ್ಟರ್ ಪಾರ್ಸನ್ಸ್‌ ಕಾರ್ಪೊರೇಷನ್‌ ನಲ್ಲಿ ಹಿರಿಯ ಸಿಸ್ಟಮ್‌ ಇಂಜಿನಿಯರ್‌ ಆಗಿದ್ದರು.  ವ್ಯವಸ್ಥಿತ ತಾರತಮ್ಯದಿಂದಾಗಿ ಕಳೆದ ಅಕ್ಟೋಬರ್‌ ತಿಂಗಳಿನಿಂದ ತಾನು ನಿರುದ್ಯೋಗಿಯಾಗಿರುವುದಾಗಿ ಅವರು ಸಲ್ಲಿಸಿದ್ದ ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.

AL.COM ವರದಿ ಪ್ರಕಾರ, ವರ್ಶ್ನಿ ಅವರು ತನ್ನ ಸಾವಿನ ಸನಿಹದಲ್ಲಿದ್ದ ಸಂಬಂಧಿಯೊಂದಿಗೆ ಕರೆ ಮಾಡಿ ಹಿಂದಿಯಲ್ಲಿ ಮಾತನಾಡುತ್ತಿರುವುದನ್ನು ಕೇಳಿದ ಬಿಳಿ ಸಹೋದ್ಯೋಗಿಯೊಬ್ಬರು ಕೇಳಿಸಿಕೊಂಡು ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ