ಭಾರತೀಯ ಸೇನಾ ವೈದ್ಯರಿಂದ ಹೊಸ ದಾಖಲೆ | ಕಠಿಣ ವಾತಾವರಣದಲ್ಲಿ 16,000 ಅಡಿ ಎತ್ತರದ ಪ್ರದೇಶದಲ್ಲಿ ಸೈನಿಕನಿಗೆ ಯಶಸ್ವಿ ಚಿಕಿತ್ಸೆ - Mahanayaka
10:10 AM Wednesday 20 - August 2025

ಭಾರತೀಯ ಸೇನಾ ವೈದ್ಯರಿಂದ ಹೊಸ ದಾಖಲೆ | ಕಠಿಣ ವಾತಾವರಣದಲ್ಲಿ 16,000 ಅಡಿ ಎತ್ತರದ ಪ್ರದೇಶದಲ್ಲಿ ಸೈನಿಕನಿಗೆ ಯಶಸ್ವಿ ಚಿಕಿತ್ಸೆ

03/11/2020


Provided by

ಲೇಹ್: ಅತ್ಯಂತ ಪ್ರತಿಕೂಲ ಹವಮಾನ ಪರಿಸ್ಥಿತಿ ಇರುವ ಪೂರ್ವ ಲಡಾಕ್ ನಲ್ಲಿ ಭಾರತೀಯ ಸೇನಾ ವೈದ್ಯರು ಹೊಸ ಸಾಧನೆಯೊಂದನ್ನು ಮಾಡಿದ್ದು,  16,000 ಅಡಿ ಎತ್ತರದಲ್ಲಿ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.


ಪೂರ್ವ ಲಡಾಖ್ ನಲ್ಲಿ ಅತ್ಯಂತ ಕಠಿಣ ವಾತಾವರಣವಿರುತ್ತದೆ. ಹೀಗಾಗಿ ಸೈನಿಕರು ವಿವಿಧ ಅನಾರೋಗ್ಯಗಳಿಗೆ ಒಳಗಾಗುತ್ತಾರೆ. ಇಲ್ಲಿ ಸೈನಿಕರಿಗೆ ಅನಾರೋಗ್ಯ ಕಂಡು ಬಂದರೂ ಅವರನ್ನು ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯನ್ನು ಸೈನಿಕರೊಬ್ಬರು ಎದುರಿಸಿದ್ದರು. ಈ ವೇಳೆ ಸೇನಾ ಆಸ್ಪತ್ರೆಯಾದ ಫೀಲ್ಡ್ ಆಸ್ಪತ್ರೆಯ ಲೆಫ್ಟಿನೆಂಟ್ ಕರ್ನಲ್, ಮೇಜರ್ ಮತ್ತು ಕ್ಯಾಪ್ಟನ್ ಸೇರಿದಂತೆ ಮೂವರು ವೈದ್ಯರ ತಂಡವು 16,000 ಅಡಿ ಎತ್ತರದಲ್ಲಿ ಚಿಕಿತ್ಸೆ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.


ಹವಾಮಾನ ಬಹಳ ಕಠಿಣ ಪರಿಸ್ಥಿತಿಯಲ್ಲಿದ್ದರೂ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಿದ್ದಾರೆ. ಹಿಮಾವೃತ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸೈನಿಕರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಸೇನಾ ವೈದ್ಯರು ವಿಶೇಷವಾದ ಚಿಕಿತ್ಸೆಯನ್ನು ನೀಡುತ್ತ ಬರುತ್ತಿದ್ದಾರೆ.


ಈ ಪ್ರದೇಶದಲ್ಲಿ ಚಿಕಿತ್ಸೆ ನೀಡುವುದೂ ಒಂದು  ದೊಡ್ಡ ವಿಷಯವೇ? ಎಂದು ಬಹುತೇಕರಿಗೆ ಅನುಮಾನ ಬರಬಹುದು. ಆದರೆ, ಈ ಪ್ರದೇಶದಲ್ಲಿ ಆಮ್ಲಜನಕದ ಕೊರತೆ ಇರುತ್ತದೆ ಮತ್ತು ವೈದ್ಯಕೀಯ ಉಪಕರಣಗಳು ಇಲ್ಲಿ ಕೆಲಸ ಮಾಡುವುದೇ ಕಷ್ಟಕರವಾಗಿದೆ. ಪೂರ್ವ ಲಡಾಖ್ ನಲ್ಲಿ ಸೇವೆ ಸಲ್ಲಿಸುವುದೆಂದರೆ ಅಷ್ಟು ಸುಲಭದ ವಿಷಯವ ಅದೊಂದು ಸಾಹಸವೇ ಸರಿ.


 

ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ

https://chat.whatsapp.com/HeAiP3WAQfT6ajtrJVJ4kP

ಇತ್ತೀಚಿನ ಸುದ್ದಿ