2050ರ ವೇಳೆಗೆ ಭಾರತದ ಈ 30 ನಗರಗಳು ನೀರಿಲ್ಲದೇ ನರಳಬೇಕಾಗುತ್ತದೆಯಂತೆ? | ನಿಮ್ಮ ನಗರದ ಬಗ್ಗೆ ತಿಳಿದುಕೊಳ್ಳಲು ಸುದ್ದಿ ಓದಿ - Mahanayaka

2050ರ ವೇಳೆಗೆ ಭಾರತದ ಈ 30 ನಗರಗಳು ನೀರಿಲ್ಲದೇ ನರಳಬೇಕಾಗುತ್ತದೆಯಂತೆ? | ನಿಮ್ಮ ನಗರದ ಬಗ್ಗೆ ತಿಳಿದುಕೊಳ್ಳಲು ಸುದ್ದಿ ಓದಿ

03/11/2020

ನವದೆಹಲಿ: ತೀವ್ರ ನೀರಿನ ಕೊರತೆಯಿಂದ 2050ರ ವೇಳೆಗೆ ಭಾರತದ ಈ 30 ನಗರಗಳು ಒದ್ದಾಡಬೇಕಾಗುತ್ತದೆಯಂತೆ. ಹೀಗೊಂದು ವರದಿಯನ್ನು ನೀಡಿರುವುದು ವಿಶ್ವ ವನ್ಯಜೀವಿ ನಿಧಿ (World Wildlife Fund (WWF)). ಈ ಬಗ್ಗೆ ಸೋಮವಾರ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಕರ್ನಾಟಕದ ಬೆಂಗಳೂರು ಸೇರಿದಂತೆ ಭಾರತದ ಒಟ್ಟು 30 ನಗರಗಳು 2050ರ ವೇಳೆಗೆ ನೀರಿಲ್ಲದೆ ಒದ್ದಾಡುವ ಸ್ಥಿತಿಗೆ ತಲುಪಲಿದೆ ಎಂದು ಹೇಳಿದೆ.



Provided by

ನೀರಿಲ್ಲದೇ ನರಳುವ ಸ್ಥಿತಿಗೆ ವಿಶ್ವದ 100 ನಗರಗಳು ತಲುಪಲಿದೆ. ಈ ಪೈಕಿ ಭಾರತದ್ದೇ 30 ನಗರಗಳಿವೆ. ನೀರಿನ ಅಭಾವಕ್ಕೊಳಗಾಗುವ ಅತಿ ದೊಡ್ಡ ಅಪಾಯದಲ್ಲಿ ಈ ನಗರಗಳಿರಲಿದೆಯಂತೆ. ಭಾರತೀಯ ನಗರಗಳು ಹವಮಾನ ಸೇರಿದಂತೆ ವಿವಿಧ ಪರಿಸರ ಪರ ಕಾರ್ಯಗಳನ್ನು ಹೆಚ್ಚು ಮಾಡದೇ ಇದ್ದರೆ, ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಡಬ್ಲ್ಯುಡಬ್ಲ್ಯುಎಫ್ ಹೇಳಿದೆ.


ದೆಹಲಿ, ಜೈಪುರ, ಇಂದೂರ್, ಅಮೃತಸರ, ಪುಣೆ, ಶ್ರೀನಗರ, ಕೋಲ್ಕತ್ತಾ, ಬೆಂಗಳೂರು, ಮುಂಬೈ, ಕೋಝಿಕ್ಕೋಡ್, ವಿಶಾಖಪಟ್ಟಣಂ, ಚಂಡೀಗಢ, ಅಮೃತಸರ, ಅಹ್ಮದಾಬಾದ್, ಚೆನ್ನೈ ಮೊದಲಾದ ಪ್ರಮುಖ ನಗರಗಳು ಸೇರಿ ಭಾರತದ 30 ನಗರಗಳು 2050ರ ಸಮಯದಲ್ಲಿ ತೀವ್ರವಾದ ಜಲಕ್ಷಾಮ ಎದುರಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.


ಈ ನಗರಗಳು ನೀರಿನ ಕೊರತೆಯನ್ನು ನೀಗಿಸಲು ಮತ್ತು ಸಮತೋಲನದಲ್ಲಿಡಲು ಜಲಾನಯನ ಪ್ರದೇಶಗಳನ್ನು ಪುನರ್ ಸ್ಥಾಪಿಸುವುದು, ಹೊಸ ನಗರಗಳಲ್ಲಿ ಗದ್ದೆಗಳನ್ನು ನಿರ್ಮಾಣ ಮಾಡುವುದು, ಮಳೆಗಾಲ ಸಂದರ್ಭದಲ್ಲಿ ನೀರಿನ ಸಂರಕ್ಷಣೆ ಮೊದಲಾದ ಚಟುವಟಿಕೆಗಳನ್ನು ಈಗಲೇ ಆರಂಭಿಸಬೇಕು. ಮುಚ್ಚಲ್ಪಟ್ಟಿದ್ದ ಕೆರೆಗಳನ್ನು ಮತ್ತೆ ತೆರೆದು, ಅಂತರ್ಜಲವನ್ನು ಭದ್ರಗೊಳಿಸುವ ಅಗತ್ಯವಿದೆ ಎಂದು ಸಮೀಕ್ಷೆ ಹೇಳಿದೆ.


ಮಹಾನಾಯಕ ಮಾಧ್ಯಮದ ಎಲ್ಲ ಸುದ್ದಿಗಳಿಗಾಗಿ ನಮ್ಮ ಗ್ರೂಪ್ ಗಳಿಗೆ ಜಾಯಿನ್ ಆಗಿ

https://chat.whatsapp.com/HeAiP3WAQfT6ajtrJVJ4kP

ಇತ್ತೀಚಿನ ಸುದ್ದಿ