ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಅನುನಾಸ್ಪದ ಸಾವು | ಸಾವಿನ ರಾಜಕೀಯ ಆರಂಭ! - Mahanayaka
8:12 AM Thursday 7 - December 2023

ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಅನುನಾಸ್ಪದ ಸಾವು | ಸಾವಿನ ರಾಜಕೀಯ ಆರಂಭ!

03/11/2020

ನಾದಿಯಾ: ಪಶ್ಚಿಮಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಅನುಮಾನಾಸ್ಪದ ಸಾವು ಪತ್ತೆಯಾಗುತ್ತಿದೆ. ಚುನಾವಣೆಗೆ ಮೊದಲು ಸಿಎಎ, ಎನ್ ಆರ್ ಸಿಯಂತಹ ಗಂಭೀರ ಸಂದರ್ಭದಲ್ಲಿಯೂ ನಡೆಯದ ಘಟನೆಗಳು ಈಗ ಹೇಗೆ ನಡೆಯುತ್ತಿದೆ ಎಂಬ ಅನುಮಾನಗಳು ಸದ್ಯ ಸೃಷ್ಟಿಯಾಗಿವೆ.


ಬಿಜೆಪಿ ಮುಖಂಡನೋರ್ವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಿಜೆಪಿ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಒಂದು ತಿಂಗಳಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಅನುಮಾನಾಸ್ಪದ ಸಾವು ಸಂಭವಿಸಿದೆ. ಇದು ಸಾವಿನ ರಾಜಕೀಯಕ್ಕೆ ಅವಕಾಶ ದೊರೆತಂತಾಗಿದೆ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಹೀಗೆ ಯಾಕೆ ನಡೆಯುತ್ತಿದೆ ಎಂಬ ಬಗ್ಗೆಯೂ ಅನುಮಾನಗಳು ಸೃಷ್ಟಿಯಾಗಿವೆ.


ಇತ್ತೀಚಿನ ಸುದ್ದಿ