ಆಮೆ ಮತ್ತು ಮಣ್ಣು ಮುಕ್ಕ ಹಾವು ಅಕ್ರಮ ಮಾರಾಟ ಯತ್ನ | ಬಿ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮಾಲು ಸಹಿತ ನಾಲ್ವರ ಬಂಧನ - Mahanayaka

ಆಮೆ ಮತ್ತು ಮಣ್ಣು ಮುಕ್ಕ ಹಾವು ಅಕ್ರಮ ಮಾರಾಟ ಯತ್ನ | ಬಿ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮಾಲು ಸಹಿತ ನಾಲ್ವರ ಬಂಧನ

03/11/2020

  • ಕೋಗಲೂರು ಕುಮಾರ್

ಸಾಗರ: ಮಣ್ಣುಮುಕ್ಕ ಹಾವು (ಡಬ್ಬಲ್ ಇಂಜೀನ್) ಹಾಗೂ ಆಮೆಯನ್ನು ಮಾರಾಟ ಜಾಲದ ಜಾಲವನ್ನು ಸಾಗರ ಅರಣ್ಯ ಸಂಚಾರಿ ದಳದ  ಪೊಲೀಸ್  ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್  ಬಿ ಅವರ ನೇತೃತ್ವದ ತಂಡವು ಪತ್ತೆ ಹಚ್ಚಿ ಮಾಲು ಸಹಿತ ನಾಲ್ವರು ಆರೋಪಿಗಳನ್ನು ಬಂಧಿದ್ದಾರೆ.


ಕಾನೂನು ಬಾಹಿರವಾಗಿ ಆಮೆ ಮತ್ತು ಮಣ್ಣು ಮುಕ್ಕ ಹಾವಿನ ಮಾರಾಟಕ್ಕೆ ತೊಡಗಿದ್ದ ಜಾಲವನ್ನು ಬೆನ್ನತ್ತಿದ ಇವರು ದಾವಣಗೆರೆ ಹರಿಹರ ನಗರದಲ್ಲಿ ಆರೋಪಿಗಳನ್ನು ಬಂಧಿಸಿ  ಆಮೆ ಮತ್ತು ಮಣ್ಣಮುಕ್ಕ ಹಾವನ್ನು ವಶಕ್ಕೆ ಪಡೆದಿದ್ದಾರೆ.


ವೀರಗಾರನ ಬೈರಕೊಪ್ಪ ಶಿವಮೊಗ್ಗ ತಾಲೂಕಿನ ರಮೇಶ್ ನಾಯ್ಕ ಬಿನ್ ಮಂಗಲ್ಯ ನಾಯ್ಕ ,  ಕಜ್ಜರಿ ಗ್ರಾಮ ರಾಣಿಬೆನ್ನೂರು ತಾಲೂಕಿನ ಜಗದೀಶ ರಾಮಪ್ಪ ತಿಮ್ಮಜ್ಜಿ ಬಿನ್ ರಾಮಪ್ಪ ತಿಮ್ಮಜ್ಜಿ , ಹೊನ್ನೂರು ಗ್ರಾಮ ದಾವಣಗೆರೆ ತಾಲೂಕಿನ  ಹರೀಶ ಬಿನ್ ಪಾಂಡುರಂಗ, ಹಾಲುಗುಡ್ಡೆ ಹೊಸನಗರದ ನಾಗೇಂದ್ರ ಬಿನ್ ಲಿಂಗೋಜಿ ಬಾಳೂರು ಬಂಧಿತ ಆರೋಪಿಗಳಾಗಿದ್ದಾರೆ.


ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಂಗನಾಥ, ಗಣೇಶ್, ರತ್ನಾಕರ್, ಗಿರೀಶ್ . ವಿಶ್ವನಾಥ್ ಅವರು ಭಾಗವಹಿಸಿದ್ದರು.  ಬಂಧಿತರ ಮೇಲೆ ಸಾಗರ ಅರಣ್ಯ ಸಂಚಾರಿ ದಳದ ಪೊಲೀಸ್ ಠಾಣೆಯಲ್ಲಿ  ವನ್ಯಜೀವಿಗಳ ಸಂರಕ್ಷಣಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.


ಇತ್ತೀಚಿನ ಸುದ್ದಿ