ಇಸ್ರೇಲ್, ಇರಾನ್ ಗೆ ಸದ್ಯಕ್ಕೆ ಪ್ರವಾಸ ಬೇಡ: ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ - Mahanayaka

ಇಸ್ರೇಲ್, ಇರಾನ್ ಗೆ ಸದ್ಯಕ್ಕೆ ಪ್ರವಾಸ ಬೇಡ: ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಸೂಚನೆ

indian ministry
14/04/2024


Provided by

ದೆಹಲಿ: ಇರಾನ್‌(Iran) ಹಾಗೂ ಇಸ್ರೇಲ್‌ (Israel) ನಡುವೆ ಮತ್ತೆ ಯುದ್ದದ ವಾತಾವರಣ ಕಂಡು ಬಂದಿರುವ ನಡುವೆ ಆ ದೇಶಗಳಿಗೆ ಸದ್ಯಕ್ಕೆ ಪ್ರವಾಸ ಬೇಡ ಎಂದು ಭಾರತೀಯರಿಗೆ ಸೂಚನೆ ನೀಡಲಾಗಿದೆ.

ಭಾರತದ ವಿದೇಶಾಂಗ ಸಚಿವಾಲಯವು ಈ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇರಾನ್‌ ಈಗಾಗಲೇ ಪ್ರತಿಕಾರದ ಕ್ರಮವಾಗಿ ಇಸ್ರೇಲ್‌ ಮೇಲೆ ದಾಳಿ ಆರಂಭಿಸಿದೆ. ಕ್ಷಿಪಣಿಗಳನ್ನು ಬಳಸಿ ಇಸ್ರೇಲ್‌ ಮೇಲೆ ಇರಾನ್‌ ಮೇಲೆ ದಾಳಿ ಮಾಡುತ್ತಿದೆ. ಇದು ಇನ್ನೂ ಕೆಲವು ದಿನಗಳು ಮುಂದುವರಿಯುವ ಲಕ್ಷಣಗಳು ಇರುವ ಕಾರಣದಿಂದ ಈ ದೇಶಗಳಿಗೆ ಪ್ರವಾಸ ಇಲ್ಲವೇ ಪ್ರಯಾಣ ಮಾಡುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಲಾಗಿದೆ. ಅಲ್ಲದೇ ಇಸ್ರೇಲ್‌ ದಾಳಿ ವೇಳೆ ಭಾರತೀಯರು ಸಿಲುಕಿದ್ದರೆ ಅವರನ್ನು ರಕ್ಷಿಸಿಕೊಳ್ಳಲು ಎಲ್ಲಾ ಕ್ರಮ ವಹಿಸಲಾಗುತ್ತದೆ ಎಂದು ಸಹಾಯವಾಣಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.

ಇಸ್ರೇಲ್‌ ನಲ್ಲಿ ನೆಲೆಸಿರುವ ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ. ಇಸ್ರೇಲ್‌ ನಲ್ಲಿರುವ ಭಾರತದ ದೂತವಾಸ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ. ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ದೂತವಾಸ ಕಚೇರಿ ಪ್ರಯತ್ನಿಸಲಿದೆ. ಭಾರತೀಯರು ಶಾಂತರಾಗಿ ಇರಿ. ಈಗಾಗಲೇ ಎರಡೂ ದೇಶಗಳ ನಡುವಿನ ಸಂಘರ್ಷದ ಪರಿಸ್ಥಿತಿಯನ್ನು ಭಾರತದ ವಿದೇಶಾಂಗ ಸಚಿವಾಲಯವು ಸೂಕ್ಷ್ಮವಾಗಿಯೇ ಗಮನಿಸುತ್ತಿದೆ ಎಂದು ತಿಳಿಸಲಾಗಿದೆ.

ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ಭಾರತೀಯ ರಕ್ಷಣೆಗೆ ಬಿಡುಗಡೆ ಮಾಡಲಾಗಿದೆ. ಅದನ್ನು ಪಾಲಿಸಿರಿ. ಇಸ್ರೇಲ್‌ ನ ಅಧಿಕಾರಿಗಳೊಂದಿಗೆ ನಮ್ಮ ವಿದೇಶಾಂಗ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಸದ್ಯಕ್ಕೆ ಆತಂಕಪಡುವ ಸನ್ನಿವೇಶವಿಲ್ಲ. ಆದರೆ ಸಹಾಯವಾಣಿ ಸಹಿತ ಎಲ್ಲಾ ಸಹಕಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷಗಳು ಹೆಚ್ಚುತ್ತಿರುವುದಕ್ಕೆ ಭಾರತವೂ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ದೇಶಗಳಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಗಮನ ನೀಡಬೇಕು. ಭದ್ರತೆಗೆ ಅಡ್ಡಿಯಾಗುವ ವಿಚಾರದಲ್ಲಿ ಗಮನ ನೀಡಬೇಕು. ಉದ್ವಿಗ್ವತೆ ತಗ್ಗಿಸಲು ಕ್ರಮ ವಹಿಬೇಕು. ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು. ಉಭಯ ದೇಶಗಳ ಸಾಮಾನ್ಯರ ಹಿತದ ಕಡೆ ಗಮನ ಕೊಡಬೇಕು ಎಂದು ಭಾರತ ಸಲಹೆ ನೀಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ