ಕೆನಡಾದಲ್ಲಿ ಸುಟ್ಟು ಕರಕಲಾದ ಭಾರತೀಯ ಮೂಲದ  ದಂಪತಿ ಮತ್ತು 16 ವರ್ಷದ ಮಗಳು: ಈ ಸಾವಿನ ಬಗ್ಗೆ ಇದೆ ನೂರೆಂಟು ಅನುಮಾನ! - Mahanayaka

ಕೆನಡಾದಲ್ಲಿ ಸುಟ್ಟು ಕರಕಲಾದ ಭಾರತೀಯ ಮೂಲದ  ದಂಪತಿ ಮತ್ತು 16 ವರ್ಷದ ಮಗಳು: ಈ ಸಾವಿನ ಬಗ್ಗೆ ಇದೆ ನೂರೆಂಟು ಅನುಮಾನ!

canada home
16/03/2024


Provided by

ನವದೆಹಲಿ: ಭಾರತೀಯ ಮೂಲದ ದಂಪತಿ ಹಾಗೂ ಅವರ 16 ವರ್ಷದ ಪುತ್ರಿ ಕೆನಡಾದಲ್ಲಿ ಅನುಮಾನಾಸ್ಪದ ಬೆಂಕಿ ಅನಾಹುತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

ರಾಜೀವ್ ವಾರಿಕೂ(51) ಅವರ ಪತ್ನಿ  ಶಿಲ್ಪಾ ಕೋಥಾ(47) ಹಾಗೂ ಇವರ ಪುತ್ರಿ ಮಾಹೇಕ್ ವಾರಿಕೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದು, ಮಾರ್ಚ್ 7ರಂದು ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಇದು ಬೆಂಕಿ ಆಕಸ್ಮಿಕ ಎಂದು ಶಂಕಿಸಲಾಗಿತ್ತು.  ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ  ಇದು ಬೆಂಕಿ ಆಕಸ್ಮಿಕವಲ್ಲ, ಅನುಮಾನಾಸ್ಪದ ಸಾವು ಎಂದು ಎಂದು ನಿರ್ಧರಿಸಲಾಗಿದೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಏಕಾಏಕಿ ದೊಡ್ಡ ಸ್ಫೋಟ ಸಂಭವಿಸಿದ್ದು, ಈ ವೇಳೆ ಬೆಂಕಿ ವ್ಯಾಪಕವಾಗಿ ವ್ಯಾಪಿಸಿತು.  ಕೆಲವೇ ಗಂಟೆಗಳಲ್ಲಿ ಇಡೀ ಮನೆಯನ್ನು ಬೆಂಕಿ ವ್ಯಾಪಿಸಿದೆ ಎಂದು ಹೇಳಿದ್ದಾರೆ.

canada home

ಬೆಂಕಿ ನಂದಿಸಿದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಮನೆಯೊಳಗೆ 3 ಮಾನವ ಅವಶೇಷಗಳು ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೀವ್ ವಾರಿಕೋ ಟೊರೊಂಟೋ ಪೊಲೀಸ್  ಇಲಾಖೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದರು. 2016ರಲ್ಲಿ ಅವರ ಸೇವೆ ಕೊನೆಗೊಂಡಿತ್ತು.

ಇವರ ಮಗಳು ಮಾಹೇಕ್ ವಾರಿಕೋ ಫುಟ್ಬಾಲ್ ಆಟದಲ್ಲಿ ನಿಪುಣೆಯಾಗಿದ್ದಳು. ಅಲ್ಲದೇ ಉತ್ತರ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ವೇತನ ಪಡೆದುಕೊಂಡ ಪ್ರತಿಭಾನ್ವಿತ ಅಸಾಧಾರಣ ಪ್ರತಿಭೆಯಾಗಿದ್ದಳು ಎಂದು ಆಕೆಯ ತರಬೇತುದಾರ ಸ್ಮರಿಸಿದ್ದಾರೆ.

ಇನ್ನೂ ಈ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಥಳೀಯವಾಗಿ ಈ ಘಟನೆಯ ಬಗ್ಗೆ ಯಾವುದೇ ಮಾಹಿತಿಗಳಿದ್ದರೂ ಪೊಲೀಸರಿಗೆ ನೀಡುವಂತೆ ಪೊಲೀಸರು ಸ್ಥಳೀರಿಗೆ ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ