ಭಾರತೀಯ ರೈಲ್ವೆ ಇಲಾಖೆಯಲ್ಲಿ 1,376 ವಿವಿಧ ಹುದ್ದೆಗಳಿವೆ: ಅರ್ಜಿ ಸಲ್ಲಿಕೆ ಆರಂಭವಾಗಿದೆ - Mahanayaka
7:24 AM Saturday 14 - September 2024

ಭಾರತೀಯ ರೈಲ್ವೆ ಇಲಾಖೆಯಲ್ಲಿ 1,376 ವಿವಿಧ ಹುದ್ದೆಗಳಿವೆ: ಅರ್ಜಿ ಸಲ್ಲಿಕೆ ಆರಂಭವಾಗಿದೆ

indian railway
08/08/2024

Indian Railway Recruitment 2024 – ಭಾರತೀಯ ರೈಲ್ವೆ ಇಲಾಖೆಯಲ್ಲಿ ಫೀಲ್ಡ್ ವರ್ಕರ್ ಸೇರಿದಂತೆ ವಿವಿಧ 1376 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಕರೆಯಲಾಗಿದೆ. ಫೀಲ್ಡ್ ವರ್ಕರ್ ಹುದ್ದೆಗಳ ಜೊತೆಗೆ ನರ್ಸಿಂಗ್ ಸುಪೇರಿಟೆಂಡಂಟ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

ಭಾರತೀಯ ರೈಲ್ವೆ ಇಲಾಖೆಯ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ನಿಗದಿಪಡಿಸಿದ ಅರ್ಹತೆಗಳ ವಿವರ, ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳ ವಿವರ, ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸಲು ನಿಗದಿಸಿರುವಂತಹ ಪ್ರಮುಖ ದಿನಾಂಕಗಳ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಂಡು ಅರ್ಜಿ ಸಲ್ಲಿಸಿ.

ನೇಮಕಾತಿ ವಿವರ : Indian Railway Department Jobs


Provided by

* ನೇಮಕಾತಿ ಇಲಾಖೆ – ಭಾರತೀಯ ರೈಲ್ವೆ ನೇಮಕಾತಿ ಮಂಡಳಿ

* ಒಟ್ಟು ಹುದ್ದೆಗಳ ಸಂಖ್ಯೆ – 1,376

* ಅರ್ಜಿ ಸಲ್ಲಿಸುವ ಪ್ರಕ್ರಿಯೆ – ಆನ್ಲೈನ್ ಮುಖಾಂತರ

ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳು ಯಾವುವು ಎಂದು ನೋಡುವುದಾದರೆ, ಕ್ಲಿನಿಕಲ್ ಸೈಕಾಲಜಿಸ್ಟ, ಹೃದಯ ತಂತ್ರಜ್ಞಾನ ಹುದ್ದೆಗಳು, ಫೀಲ್ಡ್ ವರ್ಕರ್ ಹುದ್ದೆಗಳು, ದೃಷ್ಟಿ ಪರೀಕ್ಷೆಕರು, ಭಾಷಣ ಚಿಕಿತ್ಸಕರು ಸೇರಿದಂತೆ ವಿವಿಧ ಒಟ್ಟು 1376 ಹುದ್ದೆಗಳ ಭರ್ತಿಗೆ ಈ ಒಂದು ನೇಮಕಾತಿ ನಡೆಯುತ್ತಿದೆ.

ಶೈಕ್ಷಣಿಕ ಅರ್ಹತೆಗಳು : ರೈಲ್ವೆ ನೇಮಕಾತಿ ಮಂಡಳಿಯ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ನಂತರ ಹುದ್ದೆಗಳಿಗೆ ಅನುಗುಣವಾಗಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಿ.

Pay Scale/ Monthly Salary – ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವನ್ನು ಹುದ್ದೆಗಳ ಅನುಸಾರ 7ನೇ ವೇತನ ಆಯೋಗದ ಪ್ರಕಾರ 19,900 ರೂ. ಯಿಂದ 44,900ರೂ. ವರೆಗೆ ವೇತನ ಜೊತೆಗೆ ಭತ್ಯೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?

* ರೈಲ್ವೆ ಇಲಾಖೆಯ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದವರು ಹಾಗು ಇತರ ಹಿಂದುಳಿದ ವರ್ಗದವರು 500 ರೂಪಾಯಿ ಪಾವತಿಸಬೇಕು.

* ಇನ್ನುಳಿದ ವರ್ಗದ ಅಭ್ಯರ್ಥಿಗಳು 250 ರೂ ನ್ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.

 ನೇಮಕಾತಿಯ ಪ್ರಮುಖ ದಿನಾಂಕಗಳು:

* ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ : 17 ಆಗಸ್ಟ್ 2024

* ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ : 16 ಸೆಪ್ಟೆಂಬರ್ 2024

ಪ್ರಮುಖ ಲಿಂಕುಗಳು:

ಅಧಿಸೂಚನೆಗಾಗಿ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪಡೆಯಿರಿ :  https://indianrailways.gov.in/


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ