ಫೆಲೆಸ್ತೀನ್ ಪರ ಪ್ರತಿಭಟನೆ: ಭಾರತೀಯ ವಿದ್ಯಾರ್ಥಿನಿಯ ಬಂಧನ

ಕ್ಯಾಂಪಸ್ ಆವರಣದಲ್ಲಿ ಅನಧಿಕೃತ ವಿದ್ಯಾರ್ಥಿ ನೇತೃತ್ವದ ಫೆಲೆಸ್ತಿನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ಮೂಲದ ವಿದ್ಯಾರ್ಥಿ ಅಚಿಂತ್ಯ ಶಿವಲಿಂಗಂ ಅವರನ್ನು ಅಮೆರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಬಂಧಿಸಲಾಗಿದೆ ಮತ್ತು ವಿವಿಯಿಂದ ನಿಷೇಧಿಸಲಾಗಿದೆ.
ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ವಿರುದ್ಧ ಯುಎಸ್ ನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ನಿರಂತರ ಪ್ರತಿಭಟನೆಗಳ ಮಧ್ಯೆ ಈ ಬೆಳವಣಿಗೆ ನಡೆದಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಹುಟ್ಟಿ ಓಹಿಯೋದ ಕೊಲಂಬಸ್ ನಲ್ಲಿ ಬೆಳೆದ ಶಿವಲಿಂಗಂ ಮತ್ತು ಇನ್ನೊಬ್ಬ ಸಹಪಾಠಿ ಹಸನ್ ಸಯೀದ್ ಅವರನ್ನು ಗುರುವಾರ ಬಂಧಿಸಲಾಗಿದೆ ಎಂದು ಪ್ರತಿಭಟನಾ ಸಂಘಟಕರ ದಾಖಲೆಯನ್ನು ಉಲ್ಲೇಖಿಸಿ ಪ್ರಿನ್ಸ್ಟನ್ ಅಲುಮ್ನಿ ವೀಕ್ಲಿ ವರದಿ ಮಾಡಿದೆ.
ಅಧಿಕಾರಿಗಳ ಎಚ್ಚರಿಕೆಯ ಹೊರತಾಗಿಯೂ ಗುರುವಾರ ಬೆಳಿಗ್ಗೆ ವಿದ್ಯಾರ್ಥಿ ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಮೆಕ್ಕೋಶ್ ಅಂಗಳದಲ್ಲಿ ಡೇರೆಗಳನ್ನು ಸ್ಥಾಪಿಸಿದ್ದರು ಎಂದು ಪ್ರಿನ್ಸ್ಟನ್ ಅಲುಮ್ನಿ ವೀಕ್ಲಿ ವರದಿ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.
ಆರಂಭದಲ್ಲಿ ಸುಮಾರು 110 ಜನರ ಗುಂಪನ್ನು ಕಂಡ ಧರಣಿ ಪ್ರತಿಭಟನೆ ಗುರುವಾರ ಮಧ್ಯಾಹ್ನದ ವೇಳೆಗೆ ಸುಮಾರು 300 ಕ್ಕೆ ಏರಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth