ಯುಎಇನಲ್ಲಿ ಭಾರತೀಯರು ಯುಪಿಐ ಮೂಲಕ ಶಾಪಿಂಗ್ ಮಾಡಬಹುದು..! - Mahanayaka

ಯುಎಇನಲ್ಲಿ ಭಾರತೀಯರು ಯುಪಿಐ ಮೂಲಕ ಶಾಪಿಂಗ್ ಮಾಡಬಹುದು..!

04/07/2024

ಯುಎಇ ಗೆ ಬರುವ ಭಾರತೀಯ ಪ್ರವಾಸಿಗರು ಇನ್ನು ಮುಂದೆ ದೇಶದ ಯುಪಿಐ ಸೌಲಭ್ಯವನ್ನು ಬಳಸಿ ಶಾಪಿಂಗ್ ಮಾಡಬಹುದಾಗಿದೆ. ಮಾಲ್ ಗಳು ಸಹಿತ 60,000 ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ರೆಸ್ಟೋರೆಂಟ್ ಗಳು ಶಾಪಿಂಗ್ ಕೇಂದ್ರಗಳು ಮುಂತಾದ ಕಡೆ ಇನ್ನು ಯುಪಿಐ ಪೇಮೆಂಟ್ ಇರುವ ಕ್ಯೂಆರ್ ಕೋಡ್ ಲಭ್ಯವಿರಲಿದೆ. ಇದನ್ನು ಸ್ಕ್ಯಾನ್ ಮಾಡಿ ಭಾರತದ ರೀತಿಯಲ್ಲಿಯೇ ಇಲ್ಲಿ ಶಾಪಿಂಗ್ ಮಾಡಬಹುದಾಗಿದೆ. ದುಬೈ ಮಾಲ್ ಎಮಿರೇಟ್ಸ್ ಮಾಲ್ ಮುಂತಾದ ಪ್ರಮುಖ ಮಾಲ್ಗಳಲೂ ಸೇರಿ 60,000 ಕೇಂದ್ರಗಳಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಪೇಮೆಂಟ್ ಟರ್ಮಿನಲ್ ಗಳನ್ನು ಸ್ಥಾಪಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ