ಯುಎಇಗೆ ಭೇಟಿ ಕೊಡುವ ಭಾರತೀಯರು ವ್ಯವಹಾರಕ್ಕೆ ದಿರ್ಹಂ ಉಪಯೋಗಿಸಬೇಕಾಗಿಲ್ಲ: ಫೋನ್ ಪೇ ಉಪಯೋಗಿಸಬಹುದು..!

ಯುಎಇಗೆ ಭೇಟಿ ಕೊಡುವ ಭಾರತೀಯರು ಮತ್ತು ಅಲ್ಲಿ ಕೆಲಸ ಮಾಡ್ತಾ ಇರುವ ಭಾರತೀಯರು ಇನ್ನು ಇನ್ನು ಮುಂದೆ ವ್ಯವಹಾರಕ್ಕೆ ದಿರ್ಹಂ ಉಪಯೋಗಿಸಬೇಕಾಗಿಲ್ಲ. ಫೋನ್ ಪೇ ಮೂಲಕ ರೂಪಾಯಿ ಮೂಲಕವೇ ವ್ಯವಹಾರ ನಡೆಸಬಹುದು. ದುಬಾಯಿ ಕೇಂದ್ರಿತ ಮಶರಿಕ್ ಬ್ಯಾಂಕ್ ನ ಜೊತೆ ಫೋನ್ ಪೇ ಮಾಡಿಕೊಂಡಿರುವ ಒಪ್ಪಂದದಿಂದಾಗಿ ಈ ಸೌಲಭ್ಯ ಲಭ್ಯವಾಗಿದೆ.
ಮಶಿರಿಕಿನ ನಿಯೋಪೆ ಕೌಂಟರ್ ಗಳಲ್ಲಿ ರೂಪಾಯಿ ಮೂಲಕ ಈ ವ್ಯವಹಾರ ನಡೆಸಬಹುದಾಗಿದೆ. ರೂಪಾಯಿಯ ವಿನಿಮಯ ದರವನ್ನು ತೋರಿಸಿದ ಬಳಿಕ ಭಾರತೀಯ ರೂಪಾಯಿಯಲ್ಲಿಯೇ ವ್ಯವಹಾರ ನಡೆಸಬಹುದು. ಇದಕ್ಕಾಗಿ ಮೊದಲು ಫೋನ್ ಪೇ ಆಪ್ ನಲ್ಲಿ ಯುಪಿಐ ಇಂಟರ್ ನ್ಯಾಷನಲ್ ಎಂಬ ಆಪ್ಷನ್ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಅಂತಾರಾಷ್ಟ್ರೀಯ ಪೇಮೆಂಟ್ ಗಾಗಿ ನೀವು ಬಳಸಲು ಬಯಸುತ್ತಿರುವ ಬ್ಯಾಂಕ್ ಅಕೌಂಟ್ ಸೆಲೆಕ್ಟ್ ಮಾಡಬೇಕು. ಬಳಿಕ ಯುಪಿಐ ಪಿನ್ ನೀಡಿದರೆ ಈ ಸೌಲಭ್ಯ ಲಭ್ಯವಾಗುತ್ತದೆ. ಯುಎಯಲ್ಲಿರುವ ಭಾರತೀಯರಿಗೆ ಅವರ ಮೊಬೈಲ್ ನಂಬರ್ ನಲ್ಲಿಯೇ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
ರಿಟೇಲ್ ಔಟ್ಲೆಟ್ ಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಮನೋರಂಜನಾ ಕೇಂದ್ರಗಳಲ್ಲಿ ಕ್ಯೂಆರ್ ಕೋಡ್ ಅನ್ನು ಫೋನ್ ಪೇ ಆಪ್ ಉಪಯೋಗಿಸಿ ಸ್ಕ್ಯಾನ್ ಮಾಡಿ ಹಣ ವರ್ಗಾವಣೆ ಮಾಡಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth