ಇದೇ ಮೊದಲು: ಒಡಿಶಾದಲ್ಲಿ ದೇಶದ ಮೊದಲ ರೈಸ್ ಎಟಿಎಂ ಉದ್ಘಾಟನೆ
ಒಡಿಶಾದ ಆಹಾರ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರಾ ಅವರು ಭಾರತದ ಮೊದಲ ಅಕ್ಕಿ ಎಟಿಎಂ ಅನ್ನು ಭುವನೇಶ್ವರದಲ್ಲಿ ಉದ್ಘಾಟಿಸಿದರು.
ಮಂಚೇಶ್ವರದ ಗೋದಾಮಿನಲ್ಲಿ ಸ್ಥಾಪಿಸಲಾದ ಈ ಯಂತ್ರವನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಕ್ಕಿಯ ವಿತರಣೆಯನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ಅಕ್ಕಿ ಎಟಿಎಂನಲ್ಲಿ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್ ಸ್ಕ್ರೀನ್ ಡಿಸ್ಪ್ಲೇನಲ್ಲಿ ನಮೂದಿಸಿದಾಗ 25 ಕೆಜಿ ಅಕ್ಕಿಯನ್ನು ವಿತರಿಸಲು ಅನುವು ಮಾಡಿಕೊಡುತ್ತದೆ. ನಂತರ ಬಯೋಮೆಟ್ರಿಕ್ ದೃಢೀಕರಣ ಆಗುತ್ತದೆ.
ಅಕ್ಕಿ ವಿತರಣೆಯ ಹೊಸ ವ್ಯವಸ್ಥೆಯು ಫಲಾನುಭವಿಗಳು ಸಾಂಪ್ರದಾಯಿಕ ವಿತರಣಾ ಕೇಂದ್ರಗಳಲ್ಲಿ ಕ್ಯೂ ನಿಲ್ಲುವುದನ್ನು ತಪ್ಪಿಸುತ್ತದೆ ಮತ್ತು ಸಬ್ಸಿಡಿ ಅಕ್ಕಿಯ ಕಳ್ಳತನ ಮತ್ತು ಕಾಳಸಂತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಕ್ಕಿ ಎಟಿಎಂ ಅನ್ನು ಆರಂಭದಲ್ಲಿ ಭುವನೇಶ್ವರದಲ್ಲಿ ಪರಿಚಯಿಸಲಾಗಿದ್ದು ಅಂತಿಮವಾಗಿ ಒಡಿಶಾದ ಎಲ್ಲಾ 30 ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth