ಇಂದು ಬಿ.ಸಿ.ರೋಡ್‌ನಲ್ಲಿ ಯುವಕರ ನಡೆ ಸಾಮರಸ್ಯದ ಕಡೆ ಕಾರ್ಯಕ್ರಮ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ: ಮಾಜಿ ಶಾಸಕ ರಮಾನಾಥ ರೈ ಮಾಹಿತಿ - Mahanayaka

ಇಂದು ಬಿ.ಸಿ.ರೋಡ್‌ನಲ್ಲಿ ಯುವಕರ ನಡೆ ಸಾಮರಸ್ಯದ ಕಡೆ ಕಾರ್ಯಕ್ರಮ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ: ಮಾಜಿ ಶಾಸಕ ರಮಾನಾಥ ರೈ ಮಾಹಿತಿ

ramanatha rai
19/03/2022

ಬಂಟ್ವಾಳ: ಬಿ.ಸಿ.ರೋಡು ಪೂಂಜಾ ಮೈದಾನದಲ್ಲಿ ಮಾ.19ರಂದು 3 ಗಂಟೆಗೆ ಯುವಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋದ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಮೊದಲಿಗೆ ಯುವಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡು ಬ್ರಹ್ಮಶ್ರೀ ಗುರುನಾರಾಯಣ ವೃತ್ತದಿಂದ ಕೈಕಂಬದ ಪೂಂಜ ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ. ಮತೀಯ ಭಾವನೆಗಳಿಂದ ಸಮಾಜದಲ್ಲಿ ಸಮಸ್ಯೆಗಳು ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿಯವರ ಅಹಿಂಸೆಯ ತತ್ವದ ದಡಿಯಲ್ಲಿ ಕಾಂಗ್ರೆಸ್ ಅಹಿಂಸಾತ್ಮಕ ಚಳುವಳಿಯ ಮೂಲಕ ಸಮಾಜದಲ್ಲಿ ಶಾಂತಿಗಾಗಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ಅಲ್ಲದೆ, ಕೊರೊನಾ ವೈರಸ್ ಪ್ರಾರಂಭವಾದಾಗ ಕಿಟ್ ವಿತರಣೆ ಪ್ರಾಮಾಣಿಕವಾಗಿ ಮಾಡಿದ್ದೇವೆ. ಹಸಿವಿನಿಂದ ಯಾರು ಬಳಲಬಾರದು ಎಂಬ ದೃಷ್ಟಿಯಿಂದ ಅನ್ನ ನೀಡಿದ್ದೇವೆ. ಆ ಬಳಿಕ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕ್ಷೇಮ ನಿಧಿ ಯೋಜನೆ ಮಾಡಿದ್ದೇವೆ. 58 ಬೂತ್ ಗಳಲ್ಲಿ ಕಾಂಗ್ರೇಸ್ ಪಕ್ಷ ಕಲ್ಪವೃಕ್ಷ, ಕಾಂಗ್ರೆಸ್ ನಡೆ ಗ್ರಾಮದ ಕಡೆ ಕಾರ್ಯಕ್ರಮ, ಹೀಗೆ ಬಡವರ ಸಬಲೀಕರಣ ಕಾರ್ಯಕ್ರಮವನ್ನು ಕಾಂಗ್ರೇಸ್ ಪಕ್ಷ ಮಾತ್ರ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಮಾಹಿತಿ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಟಿಬೆಟಿಯನ್ ಬೋಧಿಸತ್ವ ಪ್ರತಿಜ್ಞೆ ಸಮಾರಂಭ ನೆರವೇರಿಸಿದ ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ

ಬೈಕ್‌ ಗೆ KSRTC ಬಸ್​ ಡಿಕ್ಕಿ: ಸಹೋದರರಿಬ್ಬರು ಸ್ಥಳದಲ್ಲೇ ಸಾವು

ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ಮಣ್ಣಿನಡಿಯಲ್ಲಿ ಸಿಲುಕಿರುವ ಐವರು ಕಾರ್ಮಿಕರು

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬಸ್ ಮಗುಚಿ ಬಿದ್ದು 6 ಮಂದಿಯ ದಾರುಣ ಸಾವು

ಇತ್ತೀಚಿನ ಸುದ್ದಿ