ಆದಿ ದ್ರಾವಿಡ, ಆದಿ ಕರ್ನಾಟಕ ಬದಲು ಜಾತಿ ಹೇಳಬೇಕು: ನ್ಯಾ.ನಾಗಮೋಹನ್ ದಾಸ್ - Mahanayaka

ಆದಿ ದ್ರಾವಿಡ, ಆದಿ ಕರ್ನಾಟಕ ಬದಲು ಜಾತಿ ಹೇಳಬೇಕು: ನ್ಯಾ.ನಾಗಮೋಹನ್ ದಾಸ್

h n nagamohan das
16/05/2025


Provided by

ಬೆಂಗಳೂರು:  ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಎನ್ನುವುದು ಒಂದು ಜಾತಿ ಅಲ್ಲ. ಇದು ಅನೇಕ ಜಾತಿಗಳ ಗುಂಪು ಎಂದು ನ್ಯಾ.ನಾಗಮೋಹನ್ ದಾಸ್ ತಿಳಿಸಿದರು.

ಶುಕ್ರವಾರ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಮನವಿಯ ಮೇರೆಗೆ ಮನೆಮನೆ ಭೇಟಿ ನೀಡಿ ನಡೆಸುವ ಸಮೀಕ್ಷೆಯನ್ನು ಮೇ 25ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ(ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಮೇ 26ರಿಂದ ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಆನ್ ಲೈನ್ ಮೂಲಕ ಸ್ವಯಂ ಘೋಷಣೆ ದಿನಾಂಕವನ್ನು ಮೇ 19ರೊಂದ ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಜಾತಿಗಳ ಪಟ್ಟಿಯಲ್ಲಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಧಿಕೃತ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ  101 ಜಾತಿಗಳಿವೆ. ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ  44ವರೆ ಲಕ್ಷ ಜನ ಪರಿಶಿಷ್ಟ ಜಾತಿಗೆ ಸೇರಿದವರು ನಾವು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ  ಎಂದು ಬರೆಸಿಕೊಂಡಿದ್ದಾರೆ. ಆದರೆ ಇವು ಒಂದೊಂದು ಜಾತಿ ಅಲ್ಲ, ಅನೇಕ ಜಾತಿಗಳ ಗುಂಪು  ಎಂದು ಅವರು ತಿಳಿಸಿದರು.

ಅನೇಕ ಜನರಿಗೆ ತಮ್ಮ ಮೂಲ ಜಾತಿ ಗೊತ್ತಿಲ್ಲ.  ಕೆಲವರಿಗೆ ಮೂಲ ಜಾತಿ ಗೊತ್ತು ಆದರೆ 101 ಜಾತಿಯ ಪಟ್ಟಿಯಲ್ಲಿ ಅವರ ಜಾತಿ ಇಲ್ಲ.   ಉದಾಹರಣೆಗೆ ದಕ್ಷಿಣ ಕನ್ನಡದ ಮನ್ಸ, ರಾಯಚೂರಿನ ಮಾದಿಗದಾಸರಿ, ಕೊಡಗಿನ ತೆಂಬಟ್ಟಿ  ಈ ರೀತಿಯಲ್ಲಿ ಕೆಲವು ಜಾತಿಗಳು ಮೂಲ ಜಾತಿಯ ಹೆಸರಿದೆ.  ಆದರೆ ಪಟ್ಟಿಯಲ್ಲಿಲ್ಲ.  ಕೆಲವರಿಗೆ ಮೂಲ ಜಾತಿ ಗೊತ್ತು, ಆದರೆ ನಾವು ಹೇಳುವುದಿಲ್ಲ ಎಂದು ಅವರು ವಿವರಿಸಿದರು.

ಸಮೀಕ್ಷೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ: “ಅಪಾರ್ಟ್‌​ಮೆಂಟ್ ​ಗಳಲ್ಲಿ ಸಮೀಕ್ಷೆಗೆ ಅಡ್ಡಿಪಡಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಅಡ್ಡಿ ಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಸಮೀಕ್ಷೆ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ನಿಮ್ಮಲ್ಲಿನ ಮಾಹಿತಿ ನೀಡಿ ಅಷ್ಟೇ. ಯಾರೂ ಸಮೀಕ್ಷೆಗೆ ತಡೆ ಮಾಡುತ್ತಾರೆ ಅವರು ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಗೆ ಈ ಸಂಬಂಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ” ಎಂದರು.

“ಎಸ್​ ಸಿಯೇತರರು ಅಂದರೆ ಯಾವುದೇ ಮಾಹಿತಿ ಪಡೆಯುವುದು ಬೇಡ ಅಂದಿದ್ದೇವೆ. ಸಮೀಕ್ಷೆ ಮುಗಿದ ಮೇಲೆ ದತ್ತಾಂಶ ವಿಶ್ಲೇಷಣೆ ಮಾಡುತ್ತೇವೆ. ಮಾನದಂಡದ ಪ್ರಕಾರ ಏನೆಲ್ಲಾ ವರ್ಗೀಕರಣ ಆಗಬೇಕು ಅದನ್ನು ಮಾಡಲಿದ್ದೇವೆ. ಇನ್ನು ಯಾವುದೇ ವಿಳಂಬ ಆಗದಂತೆ ವರದಿ ನೀಡುತ್ತೇವೆ.

ಜಾತಿ ಹೇಳಬೇಕು:

ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ, ಆದಿ ಜಾಂಬವ ಸಂಬಂಧ ಜಾತಿ ಹೆಸರು ಹೇಳಬೇಕು. ಒಂದು ವೇಳೆ ಆದಿ ಕರ್ನಾಟಕ ಅಂದರೆ ಈ 101ರಲ್ಲಿ ಯಾವ ಉಪಜಾತಿ ಎಂದು ಹೇಳಬೇಕು. ಹೇಳಿಲ್ಲವಾದರೆ ಹಾಗೇ ನಮೂದು ಮಾಡಲಾಗುತ್ತದೆ. ಕೆಲ ಮಾನದಂಡದ ಆಧಾರದ ಮೇಲೆ ನಾವು ಮುಂದೆ ಆದಿ ಕರ್ನಾಟಕ, ಆದಿ ಆಂಧ್ರದ ಜಾತಿಯವರನ್ನು ಯಾವ ಉಪಜಾತಿ ಎಂದು ತೀರ್ಮಾನಿಸುತ್ತೇವೆ” ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ