ತಾಳಿ ಕಟ್ಟುವ ಬದಲು ಪರೀಕ್ಷಾ ಕೇಂದ್ರಕ್ಕೆ ಬಂದ ವರ!

19/02/2024
ಉತ್ತರಪ್ರದೇಶ: ವರನೋರ್ವ ಸೂಟು ಬೂಟು ಧರಿಸಿ ಪೊಲೀಸ್ ನೇಮಕಾತಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಮದುವೆ ಮಂಟಪದಿಂದ ನೇರವಾಗಿ ಪರೀಕ್ಷೆ ಬರೆಯಲು ವರ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾನೆ.
ಪ್ರಶಾಂತ್ ನಾಮದೇವ್ ಎಂಬಾತನ ಮದುವೆಯ ದಿನಾಂಕ ಹಾಗೂ ಪರೀಕ್ಷಾ ದಿನಾಂಕ ಒಂದೇ ದಿನವಾಗಿತ್ತು. ಹೀಗಾಗಿ ಮೊದಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾನೆ.
ಇನ್ನೂ ಪರೀಕ್ಷೆ ಬರೆದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಶಾಂತ್, ನನಗೆ ಮದುವೆಗಿಂತಲೂ ವೃತ್ತಿ ಹೆಚ್ಚು ಮುಖ್ಯ ಎಂದು ಹೇಳಿಕೊಂಡಿದ್ದಾನೆ.
ದೇಶ ಸೇವೆ ಮಾಡಬೇಕು ಎಂಬ ಆಸೆ ಇದೆ. ಹೀಗಾಗಿ ಮದುವೆಗಿಂತ ವೃತ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.