ಇಸ್ರೇಲ್ ವಿರುದ್ಧ ಇಸ್ಲಾಮಿಕ್ ದೇಶಗಳು ಒಂದಾಗಲು ಇರಾನ್ ಕರೆ

ಟೆಹರಾನ್: ಪ್ಯಾಲೆಸ್ಟೀನ್ ದೇಶದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ವಿರುದ್ಧ ಇಸ್ಲಾಮಿಕ್ ದೇಶಗಳು ಒಂದಾಗಬೇಕು ಎಂದು ಇರಾನ್ ಕರೆ ನೀಡಿದೆ.
ಇರಾನ್ ದೇಶವು ಹಮಾಸ್ ಗೆ ಹಣಕಾಸು ಹಾಗೂ ಮಿಲಿಟರಿ ನೆರವನ್ನು ನೀಡುತ್ತಿದೆ. ಆದರೆ, ಹಮಾಸ್ ಸಂಘಟನೆ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಇರಾನ್ ಹೇಳಿದೆ.
ಇರಾನ್ ಅಧ್ಯಕ್ಷ ರೈಸಿ, ಸಿರಿಯಾ ಅಧ್ಯಕ್ಷ ಬಶರ್ ಅಲ್ –ಅಸದ್ ಅವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತನಾಡಿದ್ದು, ಇಸ್ರೇಲ್ ವಿರುದ್ಧ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.
ಇಸ್ರೇಲ್ ಪ್ಯಾಲೆಸ್ಟೀನ್ ದೇಶದ ವಿರುದ್ಧ ನಡೆಸುತ್ತಿರುವ ಕೃತ್ಯ ತಡೆಯಲು ಎಲ್ಲ ಇಸ್ಲಾಮಿಕ್ ಹಾಗೂ ಅರಬ್ ರಾಷ್ಟ್ರಗಳು ಒಂದಾಗಬೇಕು ಎಂದು ರೈಸಿ ಅವರು ಹೇಳಿದ್ದಾರೆ.
ಇಸ್ರೇಲ್ ದೇಶವು ಪ್ಯಾಲೆಸ್ಟೀನ್ ಜನರ ಹತ್ಯೆಯಲ್ಲಿ ತೊಡಗಿದೆ ಎಂದು ರೈಸಿ ದೂರಿದ್ದು, ಇರಾನ್ ದೇಶವು ಎಲ್ಲ ಇಸ್ಲಾಮಿಕ್ ದೇಶಗಳ ಜೊತೆಗೆ ಸಾಧ್ಯವಾದಷ್ಟು ಬೇಗನೆ ಸಮನ್ವಯದಿಂದ ಕೆಲಸ ಮಾಡಲಿದೆ ಎಂದು ಇರಾನ್ ಅಧ್ಯಕ್ಷರ ವೆಬ್ ಸೈಟ್ ನಲ್ಲಿ ಹೇಳಲಾಗಿದೆ. 57 ದೇಶಗಳ ಒಕ್ಕೂಟವಾಗಿರುವ ಇಸ್ಲಾಮಿಕ್ ಸಹಕಾರ ಸಂಘಟನೆಯ ತುರ್ತು ಸಭೆಗೆ ತಾನು ಆತಿಥ್ಯ ವಹಿಸಲಿ ಸಿದ್ಧವಾಗಿರುವುದಾಗಿಯೂ ಇರಾನ್ ಹೇಳಿದೆ. ಆದ್ರೆ, ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.