ಪ್ರತಿದಾಳಿಗೆ ಎಲ್ಲ ಅವಕಾಶಗಳೂ ಮುಕ್ತ ಎಂದ ಇರಾನ್: ಇಸ್ರೇಲ್ ನಾಗರಿಕಲ್ಲಿ ಭೀತಿ

ಅಗತ್ಯ ಸಾಮಾನುಗಳು ಟ್ರಾನ್ಸ್ಸಿಸ್ಟರ್ ರೇಡಿಯೋ ಗಳು ಮತ್ತು ಜನರೇಟರ್ ಗಳನ್ನು ಇಸ್ರೇಲಿ ನಾಗರಿಕರು ಖರೀದಿಸುತ್ತಿರುವ ಬೆಳವಣಿಗೆಗಳು ನಡೆದಿವೆ ಎಂದು ವರದಿಯಾಗಿದೆ.ಇಂತಹ ಖರೀದಿದಾರರಿಂದ ಮಾರುಕಟ್ಟೆ ತುಂಬಿ ತುಳುಕ್ತಾ ಇತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ. ಇರಾನ್ ಬೆಂಬಲಿತ ಹಿಸ್ ಬುಲ್ಲ ಪಡೆಯು ಇಸ್ರೇಲ್ ಗೆ ಯಾವ ಸಂದರ್ಭದಲ್ಲೂ ದಾಳಿ ಮಾಡುವ ಸಾಧ್ಯತೆ ಇದೆ ಅನ್ನುವ ಸುದ್ದಿ ಹರಡಿದ್ದು ಜನರು ಭೀತಿಯಲ್ಲಿದ್ದಾರೆ
ಕುಡಿಯುವ ನೀರಿನ ಮಾರಾಟದಲ್ಲಿ ಮುನ್ನೂರು ಶೇಕಡಾ ಹೆಚ್ಚಳವಾಗಿದೆ. ಹಾಗೆ ಯೇ ಆಹಾರ ಧಾನ್ಯಗಳನ್ನು ಹಲವು ದಿನಗಳವರೆಗೆ ಕಾಪಿಡುವ ರೀತಿಯಲ್ಲಿ ಜನರು ಸಂಗ್ರಹಿಸುತ್ತಿದ್ದಾರೆ ಮತ್ತು ಜಿಪಿಎಸ್ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಅಡಚಣೆ ಉಂಟಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ
ಒಂದು ವೇಳೆ ಈ ಸಂಘರ್ಷಕ್ಕೆ ಇರಾನ್ ಸೇರಿದರೆ ಮೂರನೇ ಜಾಗತಿಕ ಯುದ್ಧವಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth