ಇರಾನ್ ನಿಂದ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ: ಇಸ್ರೇಲ್ ಗೆ ನಡುಕ - Mahanayaka
7:11 PM Thursday 12 - December 2024

ಇರಾನ್ ನಿಂದ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ: ಇಸ್ರೇಲ್ ಗೆ ನಡುಕ

02/10/2024

ಇರಾನ್ ಹಾರಿಸಿದ ಬ್ಯಾಲೆಸ್ಟಿಕ್ ಕ್ಷಿಪಣಿಯು ಇಸ್ರೇಲನ್ನು ಭೀತಿಯಲ್ಲಿ ಕೆಡವಿದೆ ಎಂದು ಹೇಳಲಾಗುತ್ತಿದೆ. 181 ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಇರಾನ್ ಇಸ್ರೇಲ್‌ನೆಡೆಗೆ ಹಾರಿಸಿದ್ದು ಒಂದು ಕೋಟಿ ಇಸ್ರೇಲಿಯರು ಸುರಕ್ಷಿತ ಬಂಕರ್ ನಲ್ಲಿ ಅಡಗಿಕೊಂಡರು ಎಂದು ಇಸ್ರೇಲ್ ಡಿಫೆನ್ಸ್ ಫೋರ್ಸ್ ಹೇಳಿದೆ.

ಈ ಕ್ಷಿಪಣಿಗಳಲ್ಲಿ ಹೆಚ್ಚಿನವನ್ನು ಅಮೆರಿಕದ ಸಹಾಯದಿಂದ ತಡೆದಿರುವುದಾಗಿ ಇಸ್ರೇಲ್ ಹೇಳಿದೆ. ಅದಾಗಿಯೂ ಮಧ್ಯ ಇಸ್ರೇಲಿನ ಗಬೇರ ಎಂಬಲ್ಲಿಯ ಶಾಲೆಯ ಮೇಲೆ ಕ್ಷಿಪಣಿಯೊಂದು ಅಪ್ಪಳಿಸಿರುವುದರ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ.

ಈ ಕ್ಷಿಪಣಿ ದಾಳಿಯ ಬಗ್ಗೆ ಅಮೆರಿಕ ಒಂದು ಗಂಟೆ ಮೊದಲೇ ಸೂಚನೆ ನೀಡಿತ್ತು. ಅದರಂತೆ ಜೆರುಸಲೇಮ್ ಮತ್ತು ಟೆಲ್ ಅವಿವನ್ನು ಗುರಿಯಾಗಿಸಿ ಇರಾನ್ ಒಂದರ ಮೇಲೆ ಒಂದರಂತೆ ಕ್ಷಿಪಣಿ ದಾಳಿಯನ್ನು ಆರಂಭಿಸಿತು. ಹಮಾಸ್ ಮತ್ತು ಹಿಝ್ಬುಲ್ಲ ನಾಯಕರನ್ನು ಹತ್ಯೆ ಮಾಡಿರುವುದಕ್ಕೆ ತಾನು ಈ ಕ್ಷಿಪಣಿ ದಾಳಿಯನ್ನು ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದ್ದು, ಸದ್ಯಕ್ಕೆ ತಾನು ತನ್ನ ದಾಳಿಯನ್ನು ಸ್ಥಗಿತಗೊಳಿಸಿರುವುದಾಗಿಯೂ ಹೇಳಿದೆ. ಒಂದು ವೇಳೆ ಇಸ್ರೇಲ್ ಪ್ರತೀಕಾರ ಎಸಗಿದರೆ ಅದರ ದುಪ್ಪಟ್ಟು ಪ್ರತೀಕಾರ ಎಸಗುವುದಾಗಿಯೂ ಎಚ್ಚರಿಕೆ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ