ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ: ಕತಾರ್ ಹೇಳಿಕೆ

02/02/2024
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಕತಾರ್ ತಿಳಿಸಿದೆ. ಓರ್ವ ಇಸ್ರೇಲಿ ಒತ್ತೆಯಾಳನ್ನು ಬಿಡುಗಡೆಗೊಳಿಸುವುದಕ್ಕೆ ಪ್ರತಿಯಾಗಿ 100 ಫೆಲಿಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಬೇಕು ಎಂಬುದು ಒಪ್ಪಂದದ ಪ್ರಮುಖ ಬೇಡಿಕೆಯಾಗಿದೆ.
ಈ ಕುರಿತು ಕಳೆದ ಕೆಲವು ದಿನಗಳಿಂದ ಫ್ರೆಂಚ್ ರಾಜಧಾನಿ ಪ್ಯಾರಿಸ್ ನಲ್ಲಿ ಮಾತುಕತೆ ನಡೆಯುತ್ತಿತ್ತು. ಈ ಮಾತುಕತೆಯಲ್ಲಿ ಕತಾರ್ ಈಜಿಪ್ಟ್ ಅಮೆರಿಕ ಭಾಗವಹಿಸಿತ್ತು. ಇದಕ್ಕಿಂತ ಮೊದಲು ಸಭೆ ಸೇರಿದ ಇಸ್ರೇಲ್ ಕ್ಯಾಬಿನೆಟ್ ಒಪ್ಪಂದದ ಕರಡಿಗೆ ಅಂಗೀಕಾರ ನೀಡಿದೆ.
ಆರಂಭದಲ್ಲಿ ಹಮಾಸ್ ತನ್ನಲ್ಲಿ ಒತ್ತೆಯಾಳಾಗಿರುವ 40 ಮಂದಿಯನ್ನು ಬಿಡುಗಡೆಗೊಳಿಸಲಿದ್ದು ಇದಕ್ಕೆ ಪ್ರತಿಯಾಗಿ ಇಸ್ರೇಲ್ 4000 ಫೆಲೆಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ. ಸದ್ಯ ಹಮಾಸ್ ನ ಕೈಯಲ್ಲಿ 131 ಇಸ್ರೇಲ್ ಒತ್ತೆಯಾಳುಗಳಿದ್ದಾರೆ ಎಂದು ವರದಿಯಾಗಿದೆ.