ಇಸ್ರೇಲ್-ಗಾಝಾ ಸಂಘರ್ಷ: ಫೆಲೆಸ್ತೀನಿ ರಾಯಭಾರಿ ಜತೆ ಭಾರತದ ವಿರೋಧ ಪಕ್ಷಗಳ ಮಾತುಕತೆ

ಇಸ್ರೇಲ್ ಮತ್ತು ಗಾಝಾದ ನಡುವಿನ ಸಂಘರ್ಷ ಇದೀಗ ವಲಯದ ಇತರ ರಾಷ್ಟ್ರಗಳಿಗೆ ಹರಡುವ ಭೀತಿ ಇರುವಂತೆಯೇ ಭಾರತದಲ್ಲಿರುವ ಫೆಲೆಸ್ತೀನಿ ರಾಯಭಾರಿಯನ್ನು ವಿರೋಧ ಪಕ್ಷಗಳ ಮುಖಂಡರು ಭೇಟಿಯಾಗಿದ್ದಾರೆ. ಮಾತ್ರವಲ್ಲ ಫೆಲೆ ಸ್ತೀನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಅಮಾನುಷ ದಾಳಿಯ ವಿರುದ್ಧ ಜಂಟಿ ಹೇಳಿಕೆ ನೀಡಿದ್ದಾರೆ. ಆದರೆ ಈ ನಿಯೋಗದಲ್ಲಿ ಬಿಜೆಪಿ ಸೇರಿಕೊಂಡಿಲ್ಲ.
ನಿಯೋಗದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ ಆಮ್ ಆದ್ಮಿ ಪಾರ್ಟಿ ಮತ್ತು ಜೆಡಿಎಸ್ ಪ್ರತಿನಿಧಿಗಳು ಇದ್ದರು. ಇವರೆಲ್ಲ ಜಂಟಿ ಹೇಳಿಕೆ ನೀಡಿದ್ದಾರೆ. ಮಾತ್ರ ಅಲ್ಲ ತಕ್ಷಣ ಕದನ ವಿರಾಮ ಏರ್ಪಡಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಫೆಲಸ್ತೀನಿನ ಸಾರ್ವಭೌಮತೆ ಮತ್ತು ಸ್ವತಂತ್ರ ರಾಷ್ಟ್ರದ ಬೇಡಿಕೆಗೆ ಮಹಾತ್ಮ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ನೀಡಿರುವ ಬೆಂಬಲವನ್ನು ಕೂಡ ಈ ಹೇಳಿಕೆಯಲ್ಲಿ ಸ್ಮರಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth