ಇಸ್ರೇಲ್-ಹಮಾಸ್ ಯುದ್ಧ: ಗಾಝಾದಿಂದ ಕಾಲ್ನಡಿಗೆಯಲ್ಲಿ ಪಲಾಯನ ಮಾಡಿದ ಸಾವಿರಾರು ಜನರು; 3,200 ದಾಟಿದ ಸಾವಿನ ಸಂಖ್ಯೆ

ಕಳೆದ ಶನಿವಾರ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ಒಂದು ವಾರದ ನಂತರ ಸಂಘರ್ಷದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,200 ದಾಟಿದೆ. ಇಸ್ರೇಲ್ ನಲ್ಲಿ ಸಾವುನೋವುಗಳ ಸಂಖ್ಯೆ 1,300 ದಾಟಿದೆ. ಗಾಝಾದಲ್ಲಿ 1,900 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ಮಾನವೀಯ ಕಚೇರಿ ಒಸಿಎಚ್ಎ ವರದಿಯ ಪ್ರಕಾರ, ಗಾಝಾದಲ್ಲಿನ ಉತ್ತರ ಪ್ರದೇಶಗಳಿಗೆ ಇಸ್ರೇಲ್ ಹೊರಡಿಸಿದ 24 ಗಂಟೆಗಳ ಸ್ಥಳಾಂತರಿಸುವ ನೋಟಿಸ್ ಗೆ ಬದ್ಧರಾಗಿ ಸಾವಿರಾರು ನಿವಾಸಿಗಳು ಗಾಝಾದಲ್ಲಿ ದಕ್ಷಿಣಕ್ಕೆ ಪಲಾಯನ ಮಾಡಿದ್ದಾರೆ.
ಉಗ್ರರನ್ನು ಎದುರಿಸುವ ಉದ್ದೇಶದಿಂದ ಗಾಝಾದಲ್ಲಿ ತಾತ್ಕಾಲಿಕ ದಾಳಿಗಳನ್ನು ನಡೆಸಿರುವುದನ್ನು ಇಸ್ರೇಲ್ ಮಿಲಿಟರಿ ಶುಕ್ರವಾರ ದೃಢಪಡಿಸಿದೆ. ಅದರೆ ಇದು ನೆಲದ ಆಕ್ರಮಣದ ಪ್ರಾರಂಭವನ್ನು ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಯುದ್ಧವಿಮಾನಗಳು ದಕ್ಷಿಣಕ್ಕೆ ಹೋಗುವ ವಾಹನಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮಾಧ್ಯಮ ಕಚೇರಿ ತಿಳಿಸಿದೆ.
ಬಿಕ್ಕಟ್ಟಿನ ಮಧ್ಯೆ ಫೆಲೆಸ್ತೀನ್ ವಿಶ್ವಸಂಸ್ಥೆಯ ರಾಯಭಾರಿ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರನ್ನು ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ. ಪರಿಸ್ಥಿತಿಯನ್ನು “ಮಾನವೀಯತೆಯ ವಿರುದ್ಧದ ಅಪರಾಧ” ಎಂದು ಅವರು ಕರೆದಿದ್ದಾರೆ.