ಇಸ್ರೇಲ್ ನ ವ್ಯಾಪಾರಿ ಹಡಗನ್ನು ವಶಪಡಿಸಿಕೊಂಡ ಇರಾನ್: ಯುದ್ಧ ಸಂಘರ್ಷ ಸ್ಥಿತಿ ಸೃಷ್ಟಿ

ಇಸ್ರೇಲ್ ನ ವ್ಯಾಪಾರಿ ಹಡಗನ್ನು ಇರಾನ್ ವಶಪಡಿಸಿಕೊಂಡಿದೆ. ಈಗಾಗಲೇ ಇರಾನ್ ಇಸ್ರೇಲ್ ನಡುವೆ ಯುದ್ಧ ಸಂಘರ್ಷ ಸ್ಥಿತಿ ಏರ್ಪಟ್ಟಿದ್ದು ಈ ವಶಪಡಿಸುವಿಕೆಯು ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಭಾವಿಸಲಾಗಿದೆ. ಇಸ್ರೇಲ್ ನ ವಿರುದ್ಧ ಆಕ್ರಮಣ ನಡೆಸುತ್ತೇವೆ ಎಂದು ಇರಾನ್ ಎಚ್ಚರಿಕೆ ಕೊಟ್ಟ ಬಳಿಕ ಈ ಘಟನೆ ನಡೆದಿದೆ.
ಇದೇ ವೇಳೆ ತನ್ನ ಹಡಗು ವಶಪಡಿಸಿಕೊಂಡಿರುವುದಕ್ಕೆ ಭಾರೀ ಬೆಲೆ ತೆರಬೇಕಾದೀತು ಎಂದು ಇಸ್ರೇಲ್ ಇರಾನಿಗೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಇಸ್ರೇಲ್ ನ ವಿರುದ್ಧ ಆಕ್ರಮಣ ನಡೆಸುವುದಕ್ಕಾಗಿ ನೂರಾರು ಮಿಸೆಯ್ಲ್ ಗಳನ್ನು ಇರಾನ್ ಸಜ್ಜೀಕರಿಸಿದೆ ಎಂದು ವರದಿಯಾಗಿದೆ. ಈ ನಡುವೆ ಇಸ್ರೇಲ್ ಗೆ ಬೆಂಬಲಾರ್ಥವಾಗಿ ಅಮೆರಿಕ ಕೂಡ ತನ್ನ ಯುದ್ದ ನೌಕೆಯನ್ನು ಸಜ್ಜುಗೊಳಿಸಿದೆ.
ಸಿರಿಯಾದ ತನ್ನ ರಾಯಭಾರ ಕಚೇರಿಗೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ ಬಳಿಕ ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಭುಗಿಲೆದ್ದಿದೆ. ಈ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಇರಾನ್ ರಾಯಭಾರಿ ಕಚೇರಿಯ ವ್ಯಕ್ತಿಗಳು ಸಾವಿಗೀಡಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth