ಇಸ್ರೇಲ್‌ನಿಂದ ವಂಶ ಹತ್ಯೆ: ಸೌದಿ ಅರೇಬಿಯಾ ಖಂಡನೆ - Mahanayaka
9:32 PM Thursday 23 - October 2025

ಇಸ್ರೇಲ್‌ನಿಂದ ವಂಶ ಹತ್ಯೆ: ಸೌದಿ ಅರೇಬಿಯಾ ಖಂಡನೆ

18/07/2024

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ವಂಶಹತ್ಯೆಯನ್ನು ಸೌದಿ ಅರೇಬಿಯ ಪ್ರಬಲವಾಗಿ ಖಂಡಿಸಿದೆ. ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೇತೃತ್ವದಲ್ಲಿ ಜಿದ್ದಾದಲ್ಲಿ ನಡೆದ ಮಂತ್ರಿಮಂಡಲ ಸಭೆಯಲ್ಲಿ ಇಸ್ರೇಲ್ ದಾಳಿಯನ್ನು ತೀವ್ರವಾಗಿ ವಿರೋಧಿಸಲಾಗಿದೆ.

ತಕ್ಷಣವೇ ಗಾಝಾದಲ್ಲಿ ಕದನ ವಿರಾಮವನ್ನು ಏರ್ಪಡಿಸಬೇಕು ಮತ್ತು ಗಾಝಾದ ಜನಸಾಮಾನ್ಯರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಸಭೆ ಆಗ್ರಹಿಸಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಮತ್ತು ವಿಶ್ವಸಂಸ್ಥೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ಇಸ್ರೇಲ್ ನಡೆಸುತ್ತಿರುವ ದಾಳಿಗಳ ವಿರುದ್ಧ ಜಗತ್ತು ಮಾತೆತ್ತಬೇಕು ಎಂದು ಕೂಡ ಸಭೆ ಅಭಿಪ್ರಾಯಪಟ್ಟಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ