ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಜೈಭೀಮ್ ಟ್ರೋಫಿ ಕ್ರೀಡಾಕೂಟ - Mahanayaka
12:50 PM Thursday 23 - October 2025

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಜೈಭೀಮ್ ಟ್ರೋಫಿ ಕ್ರೀಡಾಕೂಟ

02/09/2023

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ)ಇದರ ಜಿಲ್ಲಾ ಸಂಘಟನಾ ಕಾಯ೯ದಶಿ೯ಯಾದ ಯಾಧವ ಕೊಣಾಜೆ ಇವರ ನೇತೃತ್ವದಲ್ಲಿ ಆ.27ರಂದು ಜೈ ಭೀಮ್ ಟ್ರೋಫಿ 2023 ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಅನಾರೋಗ್ಯಕ್ಕೊಳಗಾದ ವಿಕಲಚೇತನರಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸಹಾಯಧನ ನೀಡುವ ಉದ್ದೇಶದೊಂದಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರಿಕೆಟ್ ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳನ್ನು ಕ್ರೀಡಾಕೂಟದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಧಾಪಕ ಅಧ್ಯಕ್ಷರಾದ ಬಿ.ಕೆ ಸೇಸಪ್ಪ ಬೆದ್ರಕಾಡು ಅವರನ್ನು ಸಾವ೯ಜನಿಕ ವೇದಿಕೆಯಲ್ಲಿ ಸನ್ಮಾನಿಸಲಾಯಿತು ಎಂದು ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಯಾಮಿನಿ ಬೆಟ್ಟಂಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ