ಯುವಕನ ಅಪಹರಣ: ಸಿನಿಮೀಯ ರೀತಿಯಲ್ಲಿ ಪೊಲೀಸರಿಂದ ರಕ್ಷಣೆ

20 ವರ್ಷದ ಅನುಜ್ ಎಂಬ ರಾಜಸ್ಥಾನದ ಯುವಕನನ್ನು ಕ್ರಿಮಿನಲ್ ಗಳು ಅಪಹರಿಸಿಕೊಂಡು ಹೋಗಿದ್ದರು. ಮತ್ತು ಹಿಮಾಚಲ ಪ್ರದೇಶದ ಹೊಟೇಲ್ ವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದರು. ಮಾತ್ರವಲ್ಲ, 20 ಲಕ್ಷ ರೂಪಾಯಿ ಹಣವನ್ನು ನೀಡಬೇಕು ಎಂದು ಪಾಲಕರಿಗೆ ಬೆದರಿಕೆ ಹಾಕಿದ್ದರು. ಈ ಅನುಜ್ ನನ್ನು ರಾಜಸ್ಥಾನದ ಪೊಲೀಸರು ಅತ್ಯಂತ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಅನುಜ್ ಎದ್ದೇಳು ಮಗನೇ, ಇದು ನಾವು ಜೈಪುರದ ಪೊಲೀಸರು. ಹೆದರಬೇಡ, ರಿಲಾಕ್ಸ್ ಆಗು, ನಾವು ಇಲ್ಲಿದ್ದೇವೆ ಎಂದು ಹೇಳಿ ಪೊಲೀಸ್ ತಂಡ ಬಾಗಿಲು ಮುರಿದು ಆತನ ಕೋಣೆ ಪ್ರವೇಶಿಸಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ಆಗಸ್ಟ್ 18ರಂದು ತನ್ನ ಗೆಳೆಯರೊಂದಿಗೆ ಅನುಜ್ ಸುತ್ತಾಟಕ್ಕೆ ಹೋಗಿದ್ದ. ಶ್ರೀಮಂತ ಕುಟುಂಬದವನೆಂದು ನಂಬಿದ ಒಂದು ತಂಡ ಆತನನ್ನು ಅಪಹರಿಸಿಕೊಂಡು ಹೋಗಿತ್ತು. ಈತನ ಗೆಳೆಯನನ್ನು ಚೆನ್ನಾಗಿ ಥಳಿಸಿ ರಸ್ತೆ ಬದಿಯಲ್ಲಿ ಎಸೆದು ಅವರು ಅನುಜ್ ನೊಂದಿಗೆ ಓಡಿ ಹೋಗಿದ್ದರು. ಬಳಿಕ ಒತ್ತೆ ಹಣಕ್ಕಾಗಿ ಅನುಜ್ ನ ಕುಟುಂಬವನ್ನು ಈ ಅಪಹರಣಕಾರರು ಸಂಪರ್ಕಿಸಿದ್ದರು.
ಆದರೆ ಈಗ ಹಣ ಕಡಿಮೆ ಇದೆ, ನಾವು ಹಣ ಹೊಂದಿಸಿಕೊಳ್ಳುವುದಕ್ಕಾಗಿ ಕೆಲವು ಸಮಯ ಬೇಕು ಎಂದು ಮನೆಯವರು ಹೇಳಿದರು. ಕರೆ ಬಂದ ಮೊಬೈಲ್ ನಂಬರ್ ನ ಬೆನ್ನು ಹತ್ತಿದ ಪೊಲೀಸರು ಅಪಹರಣಕಾರರ ಬೆನ್ನು ಬಿದ್ದರು. ಬಳಿಕ ಪೊಲೀಸರು ಹಿಮಾಚಲ ಪ್ರದೇಶದ ಹೊಟೇಲ್ ಒಂದರಲ್ಲಿ ಲೊಕೇಶನ್ ಪತ್ತೆ ಹಚ್ಚಿದರು ಮತ್ತು ಓರ್ವ ಮಹಿಳೆ ಸೇರಿದಂತೆ ನಾಲ್ವರು ಪುರುಷರನ್ನು ಬಂಧಿಸಿದರು. ವೀರೇಂದ್ರ ಸಿಂಗ್, ವಿನೋದ್, ಅಮಿತ್ ಕುಮಾರ್, ಜಿತೇಂದ್ರ ಭಂಡಾರಿ ಮತ್ತು ಜಮುನಾ ಸರ್ಕಾರ್ ಬಂದಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth