ದೇಶವಿರೋಧಿ ಪೋಸ್ಟ್ ಮಾಡಿದ್ರೆ ಹುಷಾರ್: ಯುಪಿಯಲ್ಲಿ ಜೀವಾವಧಿ ಶಿಕ್ಷೆ..!
ಸೋಶಿಯಲ್ ಮೀಡಿಯಾಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರ ಕಠಿಣ ಕಾನೂನಿಗೆ ಅಂಗೀಕಾರ ನೀಡಿದೆ. ಸೋಶಿಯಲ್ ಮೀಡಿಯದಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿದವರಿಗೆ ಮೂರು ವರ್ಷದಿಂದ ಜೀವಾವಧಿ ವರೆಗೆ ಶಿಕ್ಷೆ ನೀಡುವ ಅವಕಾಶ ಈ ಹೊಸ ಮಸೂದೆಯಲ್ಲಿ ಇದೆ.
ಯೂಟ್ಯೂಬ್ ಇನ್ಸ್ಟಾಗ್ರಾಂ ಫೇಸ್ಬುಕ್ ಎಕ್ಸ್ ಮುಂತಾದ ವಿವಿಧ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ಗಳನ್ನು ನಿಯಂತ್ರಿಸುವುದು ಈ ಮಸೂದೆಯ ಉದ್ದೇಶ ಎಂದು ತಿಳಿದು ಬಂದಿದೆ.
ಇದೇ ವೇಳೆ ಸರ್ಕಾರದ ಯೋಜನೆಗಳನ್ನು ಪ್ರೋತ್ಸಾಹಿಸುವವರಿಗೆ ಫಾಲೋವರ್ಸ್ ಗಳು ಮತ್ತು ಸಬ್ ಸ್ಕೈಬ್ ಗಳ ಲೆಕ್ಕಾಚಾರವನ್ನು ಪರಿಗಣಿಸಿ ಪ್ರತಿ ತಿಂಗಳು 8 ಲಕ್ಷ ವರೆಗೆ ಪ್ರತಿಫಲವನ್ನು ನೀಡಲಾಗುವುದು. ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ಗಳು ಅಕೌಂಟ್ ಮಾಲೀಕರು ಮತ್ತು ಆಪರೇಟ್ ಮಾಡುವವರು ಮುಂತಾದವರಿಗೆ ಪ್ರತಿಫಲವನ್ನು ನಿಶ್ಚಯಿಸಲಾಗಿದೆ. ಎಕ್ಸ್, ಫೇಸ್ ಬುಕ್ instagram ಮುಂತಾದ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ಗಳಿಗೆ ಗರಿಷ್ಠ 5 ಲಕ್ಷ 4 ಲಕ್ಷ ಮತ್ತು 3 ಲಕ್ಷ ರೂಪಾಯಿ ಪ್ರತಿಫಲವನ್ನು ನಿಗದಿಪಡಿಸಲಾಗಿದೆ.
ಯೂಟ್ಯೂಬ್ ನಲ್ಲಿ ವಿಡಿಯೋಗಳು ಶಾರ್ಟ್ಸ್ ಗಳು ಪೊಡ್ ಕಾಸ್ಟ್ ಮುಂತಾದವುಗಳನ್ನು ಮಾಡುವವರಿಗೆ ಕ್ರಮ ಪ್ರಕಾರ 8 ಲಕ್ಷ 7 ಲಕ್ಷ ಮತ್ತು 6 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth